ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪತಿ ಬೈಕ್ ಅಪಘಾತದಲ್ಲಿ ಸಾವು - ವಿಷಯ ತಿಳಿದು ಪತ್ನಿ ಆತ್ಮಹತ್ಯೆ, ಸಾವಿನಲ್ಲೂ ಒಂದಾದ ಪ್ರೀತಿಸಿ ಮದುವೆಯಾಗಿದ್ದ ಜೋಡಿ

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಮೇಲಿನಬೆಸಿಗೆ ಗ್ರಾಮದ ಯುವ ದಂಪತಿಗಳು ದಾರುಣ ಅಂತ್ಯ ಕಂಡಿರುವ ಘಟನೆ ನಡೆದಿದೆ.

ಹೊಸನಗರ ತಾಲೂಕು ಮೇಲಿನ ಬೆಸಿಗೆ ಗ್ರಾಮ ಪಂಚಾಯತಿಯ ಸುತ್ತ ಗ್ರಾಮದ ಕಿಲ್ಲೆ ಕ್ಯಾತರ ಕ್ಯಾಂಪಿನ 25ರ ಹರೆಯದ ಮಂಜುನಾಥ ಎಂಬುವವರು ಡಿಸೆಂಬರ್ 31ರ ಸಂಜೆ ಬೈಕಿನಲ್ಲಿ ಶಿಕಾರಿಪುರಕ್ಕೆ ಹೋಗಿದ್ದು ಶಿಕಾರಿಪುರದ ಬಳಿ ಬೈಕ್ ಅಪಘಾತವಾಗಿದ್ದು ಇಂದು ಬೆಳಿಗ್ಗೆ 9:30 ವೇಳೆಗೆ ಚಿಕಿತ್ಸೆ ಫಲಕಾರಿಯಾಗದೆ ಮಂಜುನಾಥ ಮೃತಪಟ್ಟಿದ್ದು ಸುದ್ದಿ ತಿಳಿದ ಆತನ ಪತ್ನಿ ಅಮೃತ(21)ಮನೆ ಶೆಡ್ಡಿನಲ್ಲಿ ನೇಣಿ ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೈಸೂರು ವಾಸಿಯಾಗಿದ್ದ ಅಮೃತ ರನ್ನು ಮಂಜುನಾಥ್ ಪ್ರೇಮಿಸಿ ಕೊಲ್ಲೂರಿನಲ್ಲಿ ವಿವಾಹವಾಗಿದ್ದರು. ಸುದ್ದಿ ತಿಳಿದಾಕ್ಷಣ ಹೊಸನಗರ ಪೊಲೀಸ್ ನವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Edited By : Nirmala Aralikatti
PublicNext

PublicNext

01/01/2025 08:32 pm

Cinque Terre

58.52 K

Cinque Terre

2

ಸಂಬಂಧಿತ ಸುದ್ದಿ