ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾಕು ನಾಯಿ ಸಾವು - ಮನನೊಂದ ಮಾಲೀಕ ಆತ್ಮಹತ್ಯೆ

ನೆಲಮಂಗಲ : ಮನೆಯಲ್ಲಿ ಪ್ರೀತಿಯಿಂದ ಪೋಷಿಸಿದ ನಾಯಿ ಅನಾರೋಗ್ಯದಿಂದ ಸಾವನ್ನಪ್ಪಿದ ಕಾರಣಕ್ಕೆ ಮನನೊಂದ ನಾಯಿ ಮಾಲೀಕ ಅದೇ ನಾಯಿಯ ಚೈನ್​ ಬಳಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಬೆಂಗಳೂರು ಉತ್ತರ ತಾಲ್ಲೂಕಿನ ಹೆಗ್ಗಡದೇವನಪುರ ಗ್ರಾಮದಲ್ಲಿ ನಡೆದಿದೆ.

ಹೆಗ್ಗಡದೇವನಪುರ ಗ್ರಾಮದ ನಿವಾಸಿ ಹಾಗೂ ನಾಯಿ ಮಾಲೀಕ ರಾಜಶೇಖರ್ (33) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಳೆದ 9 ವರ್ಷಗಳ ಹಿಂದೆ ಖರೀದಿಸಿದ ಜರ್ಮನ್ ಶಫರ್ಡ್ ತಳಿಯ ನಾಯಿಗೆ ‘ಬೌನ್ಸಿ’ ಎಂಬ ಹೆಸರನ್ನಿಟ್ಟು ತಮ್ಮ ಮನೆಯ ಸದಸ್ಯನಂತೆ ಪ್ರೀತಿಯಿಂದ ಪೋಷಿಸಿದ್ರು. ರಾಜಶೇಖರ್ ಅವರ ಸಾಕು ನಾಯಿ ಬೌನ್ಸಿ ಅನಾರೋಗ್ಯದಿಂದ ನಿನ್ನೆ ಮೃತಪಟ್ಟಿತ್ತು. ರಾಜಶೇಖರ್ ತಮ್ಮ ಜಮೀನಿನಲ್ಲೇ ನಾಯಿ (ಬೌನ್ಸಿ)ಯ ಅಂತ್ಯ ಸಂಸ್ಕಾರ ನೆರವೇರಿಸಿದ್ರು.

ಅಂತ್ಯಸಂಸ್ಕಾರದ ಬಳಿಕ ಮನೆಗೆ ಬಂದಿದ್ದ ರಾಜಶೇಖರ್ ಇಂದು ಬೆಳಿಗ್ಗೆ ಪ್ರೀತಿ ನಾಯಿ ಅಗಲಿಕೆಯ ನೋವು ತಾಳಲಾರದೆ ನಾಯಿ ಸರಪಳಿ (ಚೈನ್)ನನ್ನು ಕುತ್ತಿಗೆ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಮಾದನಾಯಕನಹಳ್ಳಿ ಠಾಣಾ ಪೊಲೀಸ್ರು ಪ್ರಕರಣ ದಾಖಲಿಸಿಕೊಂಡು, ನೆಲಮಂಗಲ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನೆಡೆಸಿ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.

Edited By : Shivu K
PublicNext

PublicNext

01/01/2025 07:42 pm

Cinque Terre

89.81 K

Cinque Terre

1