ಶಿವಮೊಗ್ಗ: ಶಿವಮೊಗ್ಗ ಸಿಟಿಯಲ್ಲಿ ಅಪಘಾತವೆಸಗಿ ಎಸ್ಕೇಪ್ ಆದ ವ್ಯಕ್ತಿಯ ಬಗ್ಗೆ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದ್ದು, ಸುಳಿವು ಸಿಕ್ಕರೆ ಮಾಹಿತಿ ನೀಡುವಂತೆ ಮನವಿ ಮಾಡಿದೆ.
ಪೊಲೀಸ್ ಪ್ರಕಟಣೆಯ ವಿವರ ಹೀಗಿದೆ. ಶಿವಮೊಗ್ಗ ನಗರದ ಎಪಿಎಂಸಿ ತರಕಾರಿ ಮಾರುಕಟ್ಟೆ ಬಳಿ ಕಳೆದ ಡಿಸೆಂಬರ್ 12ರಂದು ಅಪರಿಚಿತ ಬೈಕ್ ಚಾಲಕ ಅತೀ ವೇಗದಿಂದ ಬಂದು ಕೆಎ-14 ಇಎ 2425 ಹೀರೋ ಹೊಂಡ ಕಂಪೆನಿಯ ಪ್ಯಾಷನ್ ಪ್ರೋ ಸವಾರರಾದ ಎನ್ ಮಂಜುನಾಥ್ ಅವರಿಗೆ ಡಿಕ್ಕಿ ಹೊಡೆದು ಅಪಘಾತ ಮಾಡಿ ಪರಾರಿಯಾಗಿರುತ್ತಾನೆ.
ಅಪಘಾತ ಮಾಡಿದ ಮೋಟಾರ್ ಬೈಕಿನ ನಂಬರ್ ಕಾಣಿಸಿರುವುದಿಲ್ಲ, ಬೈಕಿನ ಭಾವಚಿತ್ರ ದೊರಕಿರುತ್ತದೆ. ಈ ಭಾವಚಿತ್ರದಲ್ಲಿರುವ ವ್ಯಕ್ತಿಯ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಪಶ್ಚಿಮ ಸಂಚಾರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಕೋರಿದ್ದಾರೆ.
PublicNext
01/01/2025 12:17 pm