ಶಿವಮೊಗ್ಗ: ವರ್ಷದ ಕೊನೆಯ ದಿನ ದ್ವಿಚಕ್ರ ವಾಹನ ಸವಾರರಿಬ್ಬರು ಕೂದಲೆಳೆ ಅಂತರದಲ್ಲಿ ಪ್ರಾಣ ಹಾನಿಯಿಂದ ಪಾರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಚಿಕ್ಕಪೇಟೆಯಲ್ಲಿ ಈ ಘಟನೆ ನಡೆದಿದ್ದು, ಅದೃಷ್ಟವಶಾತ್ ನಿಂತಿದ್ದ ಶಾಲಾ ಬಸ್‌ನಡಿ ಇಬ್ಬರು ಬಿದ್ದಿದ್ದಾರೆ.
ಶಾಲಾ ಬಸ್ ಟೈರ್ ಪಕ್ಕ ಬಿದ್ದ ದ್ವಿಚಕ್ರ ಸವಾರರು, ಬಸ್ ಚಲಿಸಿದ್ದರೆ ಅದರ ಕಥೆ ಬೇರೆಯೇ ಆಗಿರುತ್ತಿತ್ತು. ಹೀಗಾಗಿ ಭಾರಿ ಅನಾಹುತ ತಪ್ಪಿದಂತಾಗಿದೆ. ಹೀಗಾಗಿ ವಾಹನ ಚಾಲಕರು ಜಾಗೃತಿಯಿಂದ ವಾಹನ ಚಲಾಯಿಸಬೇಕಾಗಿ ಪೊಲೀಸರು ವಿನಂತಿಸಿದ್ದಾರೆ.
PublicNext
31/12/2024 09:39 pm