ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿವಮೊಗ್ಗ: ವಾಣಿಜ್ಯ ಮಳಿಗೆಗಳು ಮತ್ತು ಮಾಲ್ ಗಳಲ್ಲಿ ಕನ್ನಡ ನಾಮಫಲಕ ಕಡ್ಡಾಯಗೊಳಿಸುವಂತೆ ಒತ್ತಾಯ

ಶಿವಮೊಗ್ಗ: ಮಹಾನಗರ ಪಾಲಿಕೆ ವ್ಯಾಪ್ತಿಯ ವಾಣಿಜ್ಯ ಮಳಿಗೆಗಳು ಮತ್ತು ಮಾಲ್ ಗಳಲ್ಲಿ ಕನ್ನಡ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರುನಾಡು ಸಂರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪಾಲಿಕೆ ಆಯುಕ್ತ ಕವಿತಾ ಯೋಗಪ್ಪನವರ್ ರವರಿಗೆ ಮನವಿ ಸಲ್ಲಿಸಿದ್ರು.

ಪಾಲಿಕೆ ವ್ಯಾಪ್ತಿಯ ಮುಖ್ಯರಸ್ತೆಗಳಲ್ಲಿ ವಾಣಿಜ್ಯ ಸಂಕಿರಣಗಳಲ್ಲಿ, ಮಾಲ್ ಗಳಲ್ಲಿ ಕನ್ನಡವನ್ನು ಕಡ್ಡಾಯಗೊಳಿಸ ಬೇಕು, ಆಯೋಧ್ಯೆಯ ಶ್ರೀರಾಮ ಮಂದಿರಕ್ಕೆ ಹೋಗಲು ವಿಶೇಷ ಸಹಾಯಧನ ನೀಡಬೇಕು. ಹಾಗೆಯೇ ಅಂಬೇಡ್ಕರ್ ದೀಕ್ಷಾ ಭೂಮಿಗೆ ಹೋಗಿ ಬರುವವರಿಗೂ ಸಹಾಯ ಧನ ನೀಡಬೇಕು ಎಂದು ಕೋರಲಾಗಿದೆ. ಬಡವರಿಗೆ ಮನೆ ನಿರ್ಮಿಸಲು 5 ಲಕ್ಷದವರೆಗೆ ಸಹಾಯಧನ ನೀಡಬೇಕು ಎಂದು ಒತ್ತಾಯಿಸಿದ್ರು.

Edited By : PublicNext Desk
Kshetra Samachara

Kshetra Samachara

31/12/2024 06:37 pm

Cinque Terre

1.52 K

Cinque Terre

0