ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

80 ಕೋಟಿ ಆಸ್ತಿ.. ಮಗ ಉದ್ಯಮಿ, ಮಗಳು ವಕೀಲೆ ವೃದ್ಧಾಶ್ರಮದಲ್ಲಿ ಅನಾಥವಾಗಿ ಕಣ್ಮುಚ್ಚಿದ ತಂದೆ..!

ವಾರಣಾಸಿ : ಎತ್ತ ಸಾಗುತ್ತಿದೆ ಸಮಾಜ, ಮಂಜಾಗುತ್ತಿವೆ ಸಂಬಂಧಗಳು ಮಕ್ಕಳಿಗಾಗಿ ತನ್ನ ಇಡೀ ಜೀವನವನ್ನೇ ಮುಡಿಪಾಗಿಡುವ ಅಪ್ಪನ ಮುಪ್ಪಿನ ವಯಸ್ಸಿನಲ್ಲಿ ಅನಾಥರಂತೆ ಬಿಟ್ಟು ಹೋಗುವ ಮಕ್ಕಳು ಇದ್ದರೆಷ್ಟೂ ಬಿಟ್ಟರೆಷ್ಟು. ಹತ್ತಾರು ದೇವರಿಗೆ ಹರಕೆ ಹೊತ್ತು ಹೆತ್ತು ಸಾಕಿ ಸಲುಹಿ ವಿದ್ಯೆ ಕೊಡಿಸಿ ಅನ್ನದ ದಾರಿ ತೋರಿದ ತಂದೆಯನ್ನು ಅನಾಥಾಶ್ರಮದಲ್ಲಿ ಬಿಟ್ಟು ಸಮಾಜದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಮಕ್ಕಳಿಗೆ ಧಿಕ್ಕಾರವಿರಲಿ.

ಉತ್ತರ ಪ್ರದೇಶದ ಕಾಶಿಯನ್ನು ಸಾಹಿತ್ಯದ ನಗರ ಎಂದೂ ಕರೆಯುತ್ತಾರೆ. ಇಲ್ಲಿನ 80 ವರ್ಷದ ಸಾಹಿತಿ ಶ್ರೀನಾಥ್ ಖಂಡೇಲ್ವಾಲ್ ಅವರು ಕಳೆದ ಮಾರ್ಚ್‌ನಿಂದ ವಾರಣಾಸಿಯ ವೃದ್ಧಾಶ್ರಮದಲ್ಲಿ ವಾಸಿಸಿ ತಮ್ಮ 86 ನೇ ವಯಸ್ಸಿನಲ್ಲಿ ಅನಾರೋಗ್ಯದಿಂದ ಕಳೆದ ಶನಿವಾರ ನಿಧನರಾದರು.

80 ಕೋಟಿ ಆಸ್ತಿ ಒಡೆಯ 400 ಪುಸ್ತಕಗಳನ್ನು ಬರೆದ ಖ್ಯಾತ ಲೇಖಕ ಶ್ರೀನಾಥ್ ಖಂಡೇಲ್ವಾಲ್ ಅವರು ಜಗತ್ತಿಗೆ ವಿದಾಯ ಹೇಳುವ ಮುನ್ನ ಬದುಕಿದ ಬಾಳು ನಿಜಕ್ಕೂ ಶೋಚನೀಯ.. ಯುಪಿಯ ವಾರಣಾಸಿಯಲ್ಲಿ ಕೋಟಿಗಟ್ಟಲೆ ಆಸ್ತಿ ಇದ್ದರೂ ಅವರ ಕೊನೆಯ ದಿನಗಳನ್ನು ವೃದ್ಧಾಶ್ರಮದಲ್ಲಿ ಕಳೆದಿದ್ದಾರೆ. ತಂದೆಯ ಸಾವಿನ ಸುದ್ದಿ ತಿಳಿದ ನಂತರವೂ ಮಗ ಮತ್ತು ಮಗಳು ಕೊನೆಯ ಬಾರಿ ತಂದೆಯ ಮುಖ ನೋಡಲು ಬಾರದಿರುವುದು ಕರುಳು ಹಿಂಡಿದಂತಿದೆ.

ಶ್ರೀನಾಥ್ ಖಂಡೇಲ್ವಾಲ್ ಅವರ ಮಗ ದೊಡ್ಡ ಉದ್ಯಮಿ. ತಂದೆ ಅಂತ್ಯಕ್ರಿಯೆಗೆ ಬರಲು ನಿರಾಕರಿಸಿದರು ಮಗಳು ಸುಪ್ರೀಂ ಕೋರ್ಟ್‌ನಲ್ಲಿ ವಕೀಲೆ ಪೋನ್‌ ಕರೆಗಳಿಗೂ ಸಹ ಸ್ಪಂದಿಸದಿರುವುದು ಸಂಬಂಧಗಳಿಗಿರುವ ಕೊಂಡಿ ಕಳುಚಿತ್ತಿರುವುದಕ್ಕೆ ನೈಜ ಉದಾಹರಣೆಯಂತಿದೆ.

ಕೋಟಿಗಟ್ಟಲೆ ಆಸ್ತಿ ಇದ್ದರೂ ಶ್ರೀನಾಥ್ ಖಂಡೇಲ್ವಾಲ್ ಕಾಶಿ ಕುಷ್ಠರೋಗ ಸೇವಾ ಸಂಘದ ವೃದ್ಧಾಶ್ರಮದಲ್ಲಿ ಅನಾಥರಾಗಿ ಕೊನೆಯ ಜೀವನ ಕಳೆಯಬೇಕಾಯಿತು.

ಒಮ್ಮೆ ಶ್ರೀನಾಥ್ ಖಂಡೇಲ್ವಾಲ್ ಅವರು ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ದುಃಸ್ಥಿತಿಯ ಬಗ್ಗೆ ಮಾತನಾಡಿ 80 ಕೋಟಿ ಮೌಲ್ಯದ ಆಸ್ತಿ ಕಬಳಿಸಿ ಮಗ ಮತ್ತು ಮಗಳು ತನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ಕಣ್ಣೀರು ಹಾಕಿದ್ದರು.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಖಂಡೇಲ್ವಾಲ್ ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಅವರ ಮಕ್ಕಳಿಗೆ ತಿಳಿಸಲು ಪ್ರಯತ್ನಿಸಿದ್ದರೂ ಸಹ ಮಗಳು ಮತ್ತು ಮಗ ಕೊನೆಯ ಬಾರಿ ತಂದೆಯನ್ನು ನೋಡಲು ಬಯಸಲಿಲ್ಲ. ಶ್ರೀನಾಥ್​​ ಅವರ ಸ್ನೇಹಿತರು ಅಂತಿಮ ವಿಧಿಗಳನ್ನು ನೆರವೇರಿಸಿದರು. ಈ ಸುಖಕ್ಕೆ ಮಕ್ಕಳು ಬೇಕಾ ಎಂದೆನಿಸುವುದು ಸಹಜ...

Edited By : Ashok M
PublicNext

PublicNext

30/12/2024 07:29 pm

Cinque Terre

139.86 K

Cinque Terre

27

ಸಂಬಂಧಿತ ಸುದ್ದಿ