ಸುದೀರ್ಘ 46 ವರ್ಷಗಳ ಕಾಲ ನೇತ್ರತಜ್ಞರಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಜೀವನ್ ಸಿಂಗ್ ತಿತಿಯಾಲ್ ತಮ್ಮ ಬೀಳ್ಕೊಡುಗೆಯ ದಿನ ಸಹದ್ಯೋಗಿಗಳನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ. ಈ ಭಾವನಾತ್ಮಕ ದೃಶ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಕೆಲಸದ ಬಗೆಗಿನ ಸಮರ್ಪಣೆ ಮತ್ತು ರೋಗಿಗಳ ಬಗೆಗಿನ ಸಹಾನುಭೂತಿಗೆ ಹೆಸರುವಾಸಿಯಾಗಿದ್ದ ಇವರು
ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (AIIMS) ನ ಪ್ರಸಿದ್ಧ ನೇತ್ರ ತಜ್ಞರಾಗಿ ಸೇವೆ ಸಲ್ಲಿಸಿ ನಿವೃತ್ತಿಯನ್ನು ಹೊಂದಿದ್ದು, ಬೀಳ್ಕೊಡುಗೆಯ ದಿನ ತಮ್ಮ ಭಾವನೆಯನ್ನು ತಡೆದುಕೊಳ್ಳಲು ಸಾಧ್ಯವಾಗದೆ ದುಃಖದಲ್ಲಿ ಸಹದ್ಯೋಗಿಗಳನ್ನು ಬಿಗಿದಪ್ಪಿ ಕಣ್ಣೀರು ಹಾಕಿದ್ದಾರೆ.
ಈ ದೃಶ್ಯವನ್ನು ಕಂಡು ನೆಟ್ಟಿಗರು ಭಾವುಕರಾಗಿದ್ದಾರೆ.
PublicNext
06/01/2025 01:23 pm