ಹುಬ್ಬಳ್ಳಿ:ಹೊಲಕ್ಕೆ ನೀರು ಬಿಟ್ಟ ವಿಚಾರಕ್ಕೆ ಸಂಬಂಧಿಸಿದಂತೆ ದಾಯಾದಿಗಳ ನಡುವೆ ಹೊಡೆದಾಟ ಉಂಟಾದ ಪರಿಣಾಮ ಓರ್ವ ಮಹಿಳೆ ಸ್ಥಳದಲ್ಲೇ ಸಾವಿಗೀಡಾಗಿ ಮೂರು ಜನ ಗಾಯಗೊಂಡ ಘಟನೆ ಕಲಘಟಗಿ ತಾಲ್ಲೂಕಿನ ಕುರುವಿನಕೊಪ್ಪ ಗ್ರಾಮದಲ್ಲಿ ಇಂದು ಮಧ್ಯಾಹ್ನ ನಡೆದಿದೆ.
ಕುರುವಿನಕೊಪ್ಪ ಗ್ರಾಮದ ಪಾಟೀಲ್ ಕುಟುಂಬದ ನಡುವೆ ಹೊಲದ ವಿಚಾರಕ್ಕೆ ಜಗಳ ಆಗಾಗ ನಡೆಯುತ್ತಿತ್ತು. ಪಾಟೀಲ್ ಕುಟುಂಬದವರು ಹೊಲದಲ್ಲಿ ಕಬ್ಬು ಬೆಳೆದಿದ್ದರು. ಇನ್ನೆರಡು ದಿನಗಳಲ್ಲಿ ಕಬ್ಬು ಕಟಾವು ಮಾಡಬೇಕಿತ್ತು. ಆದ್ರೆ ಇವರ ದಾಯಾದಿಗಳು ಇಂದು ಹೊಲಕ್ಕೆ ನೀರು ಬಿಟ್ಟಿದ್ದಾರೆ. ಹೀಗಾಗಿ ಎರಡು ಕುಟುಂಬಗಳ ನಡುವೆ ಮಾರಕಾಸ್ತ್ರಗಳಿಂದ ಹೊಡೆದಾಟ ನಡೆದ ಪರಿಣಾಮ ಅನುಸೂಯಾ ಮಂಜುನಾಥ್ ಪಾಟೀಲ್ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಘಟನೆಯಲ್ಲಿ ಎರಡು ಕುಟುಂಬದವರಿಗೂ ಗಾಯವಾಗಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸದ್ಯ ಕೊಲೆಯಾದ ಘಟನಾ ಸ್ಥಳಕ್ಕೆ ಕಲಘಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯಲ್ಲಿ ಗಾಯಗೊಂಡವರ ಹೆಸರು ತಿಳಿದು ಬಂದಿಲ್ಲ. ಕಲಘಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ವಿನಯ ರೆಡ್ಡಿ, ಕ್ರೈಂ ಬ್ಯುರೋ, ಪಬ್ಲಿಕ್ ನೆಕ್ಸ್ಟ್
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/12/2024 07:13 pm