ಉಡುಪಿ : ಚಿತ್ರನಟ , ನಿರ್ದೇಶಕ ಉಪೇಂದ್ರ ತನ್ನ ಯು ಐ ಚಿತ್ರದ ಯಶಸ್ಸಿನ ಬಳಿಕ ತನ್ನ ಹುಟ್ಟೂರು ಕುಂದಾಪುರದ ಪ್ರವಾಸ ಕೈಗೊಂಡಿದ್ದಾರೆ. ಕುಂದಾಪುರದಲ್ಲಿ ತನ್ನ ಮೂಲ ನಾಗನ ದರ್ಶನ ಕೈಗೊಂಡು ಬಳಿಕ ಆನೆಗುಡ್ಡೆಯ ಶ್ರೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಮಾಡಿದ್ದಾರೆ.
ಬಳಿಕ ಸಾಲಿಗ್ರಾಮ ದೇವಸ್ಥಾನಕ್ಕೆ ಭೇಟಿ ನೀಡಿ, ತಮ್ಮ ಕುಲದೇವರಾದ ಶ್ರೀ ಗುರು ನರಸಿಂಹ ದೇವರಿಗೆ ಪೂಜೆಯನ್ನು ಸಲ್ಲಿಸಿದರು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ ಕೆ. ಎಸ್ ಕಾರಂತರು ಶ್ರೀದೇವರ ಪ್ರಸಾದ ನೀಡಿ ಗೌರವಿಸಿದರು. ಜೊತೆಗೆ ದೇವಸ್ಥಾನದ ಇತಿಹಾಸವನ್ನು ಉಪೇಂದ್ರ ಗೆ ತಿಳಿಸಿದರು.
PublicNext
30/12/2024 01:22 pm