ಮುಲ್ಕಿ: ಕಿನ್ನಿಗೋಳಿ ಸಮೀಪದ
ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯಲ್ಲಿ ಚಿರತೆ ಮತ್ತೆ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಭಯಭೀತರನ್ನಾಗಿಸಿದ್ದು ಚಿರತೆ ಸೆರೆಗೆ ಅರಣ್ಯ ಇಲಾಖೆಯಿಂದ ಬೋನ್ ಅಳವಡಿಸಲಾಯಿತು
ಬುಧವಾರ ರಾತ್ರಿ 10 ಗಂಟೆ ಸುಮಾರಿಗೆ ಚಿರತೆ ರಸ್ತೆಯಲ್ಲಿ ಹಾದು ಹೋಗುತ್ತಿರುವುದನ್ನು ಸ್ಥಳೀಯ ಶಿಕ್ಷಕಿ ಅರ್ಪಣಾ ವೇದವ್ಯಾಸ ಭಟ್ ನೋಡಿದ್ದು ಬಳಿಕ ಈ ಬಗ್ಗೆ ಮನೆಯ ಸಿಸಿಟಿವಿಯಲ್ಲಿ ಪರಿಶೀಲಿಸಿದಾಗ ಚಿರತೆ ಹಾದು ಹೋಗುವ ದೃಶ್ಯ ಕಂಡು ಬಂದಿತ್ತು
ಈ ಬಗ್ಗೆ ಕೂಡಲೇ ವೇದವ್ಯಾಸ ಭಟ್ ಹಾಗೂ ಕಿನ್ನಿಗೋಳಿ ಮಾಜೀ ಪಂಚಾಯತ್ ಸದಸ್ಯ ರಾಘವೇಂದ್ರ ಮತ್ತಿತರರು ಮೂಡಬಿದ್ರೆ ವಲಯದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆಗೆ ಬೋನ್ ಅಳವಡಿಸಲು ಒತ್ತಾಯಿಸಿದ್ದರು.
ಮೂಡಬಿದ್ರೆ ವಲಯದ ಅರಣ್ಯಾಧಿಕಾರಿ ನಾಗೇಶ್ ಬಿಲ್ಲವ ನಿರ್ದೇಶನದಂತೆ ಶನಿವಾರ ಸಂಜೆ ಅರಣ್ಯ ಇಲಾಖೆ ಸಿಬ್ಬಂದಿ ಮಾನಿಷ್ ರವರು ಸ್ಥಳೀಯರ ಸಹಕಾರದೊಂದಿಗೆ ಚಿರತೆ ಸೆರೆಗೆ ಬೋನ್ ಅಳವಡಿಸಲಾಯಿತು
Kshetra Samachara
28/12/2024 08:29 pm