ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಅಂಗನವಾಡಿ ಕೇಂದ್ರಗಳಿಗೆ ನೇಮಕಾತಿ - ಅಪೂರ್ಣ ಅರ್ಜಿಗಳನ್ನು ಸರಿಪಡಿಸಲು ಸೂಚನೆ

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನೆಯ ಬೆಳ್ತಂಗಡಿ, ಬಂಟ್ವಾಳ, ಮಂಗಳೂರು ಗ್ರಾಮಾಂತರ, ಮಂಗಳೂರು ನಗರ, ಪುತ್ತೂರು, ಸುಳ್ಯ ಹಾಗೂ ವಿಟ್ಲ ವ್ಯಾಪ್ತಿಯಲ್ಲಿನ ಅಂಗನ ವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 73 ಅಂಗನವಾಡಿ ಕಾರ್ಯಕರ್ತೆ ಹಾಗೂ 261 ಅಂಗನವಾಡಿ ಸಹಾಯಕಿಯರ ಗೌರವ ಸೇವೆಗಳ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು.

ಅಧಿಸೂಚನೆ ಹೊರಡಿಸಿ ಅಕ್ಟೋಬರ್ 26 ರವರೆಗೆ ಅರ್ಜಿ ಸಲ್ಲಿಸಲು ಕಾಲಾವಕಾಶ ನೀಡಲಾಗಿತ್ತು. ಅರ್ಜಿ ಸಲ್ಲಿಸುವ ಕಾಲಾವಕಾಶ ಮುಗಿದಿದ್ದು, ಅರ್ಜಿ ಸಲ್ಲಿಸುವಾಗ ವೆಬ್‌ಸೈಟ್‌ನಲ್ಲಿ 4 ವಿವಿಧ ಹಂತಗಳಿದ್ದು, ಅದರಲ್ಲಿ ಕೆಲವರಿಗೆ 1ನೇ ಹಂತದಲ್ಲಿಯೇ ಅಪ್ಲಿಕೇಶನ್ ಸಕ್ಸಸ್ ಫುಲ್ ಅಪ್‌ ಲೋಡ್ ಎಂಬ ಮೆಸೇಜ್‌ಗಳು ಅವರ ಮೊಬೈಲ್ ಗೆ ಸ್ವೀಕೃತವಾಗಿರುವುದರಿಂದ ಅರ್ಜಿ ಪೂರ್ಣಗೊಂಡಿರುವುದಿಲ್ಲ. ಸರಕಾರದ ಆದೇಶದನ್ವಯ ಅರ್ಜಿ ಸಲ್ಲಿಸುವ 4 ಹಂತಗಳನ್ನು ಪೂರ್ಣಗೊಳಿಸದೆ ಅಪೂರ್ಣ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ಡಿಸೆಂಬರ್ 26 ರಿಂದ ಜನವರಿ 5ರವರೆಗೆ ಅರ್ಜಿಗಳನ್ನು ಪೂರ್ಣಗೊಳಿಸಲು ಅವಕಾಶ ನೀಡಿದೆ. ಹಾಗಾಗಿ ಅಭ್ಯರ್ಥಿಗಳು ಮೊದಲನೇ ಹಂತ ಆನ್‌ಲೈನ್‌ನಲ್ಲಿ ಅರ್ಜಿ ನಮೂನೆಯಲ್ಲಿ ಮಾಹಿತಿ ತುಂಬಬೇಕು.

2ನೇ ಹಂತದಲ್ಲಿ ಭಾವಚಿತ್ರ ಮತ್ತು ಸಹಿ ಅಪ್‌ಲೋಡ್ ಮಾಡಬೇಕು. 3ನೇ ಹಂತದಲ್ಲಿ ದಾಖಲಾತಿ ಅಪ್‌ಲೋಡ್ ಮಾಡಬೇಕು. 4ನೇ ಹಂತ ಆಧಾ‌ರ್ ಸಂಖ್ಯೆ ನಮೂದಿಸಿ ಇ-ಹಸ್ತಾಕ್ಷರದೊಂದಿಗೆ ಅರ್ಜಿ ಪೂರ್ಣಗೊಳಿಸಬೇಕು. ಹೆಚ್ಚಿನ ಮಾಹಿತಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಬೆಳ್ತಂಗಡಿ: 08256- 295134, ಬಂಟ್ವಾಳ 7760729919, ಮಂಗಳೂರು ಗ್ರಾಮಾಂತರ

-9620636888, ಮಂಗಳೂರು ನಗರ 0824-2432809/2959809,ಪುತ್ತೂರು8251-298788, ಸುಳ್ಯ-08257-230239,ವಿಟ್ಲ 08255-238080 ಸಂಪರ್ಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By : PublicNext Desk
PublicNext

PublicNext

28/12/2024 06:46 pm

Cinque Terre

17.68 K

Cinque Terre

0