ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವದೆಹಲಿ: ಮನಮೋಹನ್ ಸಿಂಗ್ ನಿಧನವು ದೇಶಕ್ಕೆ ತುಂಬಲಾರದ ನಷ್ಟ - ಸಚಿವ ಎಚ್.ಕೆ ಪಾಟೀಲ್

ನವದೆಹಲಿ: ಭಾರತದ ಮಾಜಿ ಪ್ರಧಾನಿ ಹಾಗೂ ಕಾಂಗ್ರೆಸ್‌ನ ಹಿರಿಯ ಮುತ್ಸದ್ದಿ ಮನಮೋಹನ್ ಸಿಂಗ್ ನಿಧನವು ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಎಂದು ಸಚಿವ ಎಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.

ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭಾರತದ ಶ್ರೇಷ್ಠ ರತ್ನ ಮನಮೋಹನ್ ಸಿಂಗ್ ಅವರನ್ನು ಇಂದು ನಾವು ಕಳೆದುಕೊಂಡಿದ್ದೇವೆ. ಮನಮೋಹನ್ ಸಿಂಗ್ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ದೇಶವನ್ನು ಅತ್ಯಂತ ಸಂಪದ್ಭರಿತ ರಾಷ್ಟ್ರವನ್ನಾಗಿ ಮಾಡಿದರು.‌ ಅವರು ಅಧಿಕಾರ ವಹಿಸಿಕೊಂಡಾಗ ಮಧ್ಯಮ ವರ್ಗದ ಸಂಖ್ಯೆ 18 ಕೋಟಿ ಇತ್ತು. ಬಳಿಕ ಅನೇಕ ಅವರ ಜನ ಕಲ್ಯಾಣ ಕೆಲಸಗಳಿಂದ ಅವರ ಕಾಲಾವಧಿಯಲ್ಲಿ ಮಧ್ಯಮ ವರ್ಗದ ಜನ ಸಂಖ್ಯೆ 36 ಕೋಟಿ ಆಯಿತು. ಅವರ ಆರ್ಥಿಕ ಸುಧಾರಣೆಗಳಿಂದ ದೇಶವನ್ನು ಐದನೇ ಸ್ಥಾನಕ್ಕೆ ತಂದರು.‌ ಅವರು ಅತ್ಯಂತ ವಿನಯದಿಂದ ಇದ್ದು, ನಮ್ಮ ರಾಷ್ಟ್ರವನ್ನು ಜಗತ್ತಿನ ದೃಷ್ಟಿಯಲ್ಲಿ ಶ್ರೇಷ್ಠ ರಾಷ್ಟ್ರ ಮಾಡಿದ್ದರು ಎಂದರು.

ನನ್ನ ಜೊತೆ ಅವರು ತುಂಬಾ ನಿಕಟ ಸಂಬಂಧ ಹೊಂದಿದ್ದರು. ಏನೇ ಇದ್ದರೂ ಗಂಭೀರವಾಗಿ ತೆಗೆದುಕೊಳ್ಳುತ್ತಿದ್ದರು.‌ ಅವರ ಕೆಲಸಕ್ಕೆ ಭಾರತ ಆರ್ಥಿಕ ವ್ಯವಸ್ಥೆ ಸದಾಕಾಲ ಚಿರಋಣಿ ಆಗಿರುತ್ತದೆ.‌ ಮನಮೋಹನ್ ಸಿಂಗ್ ಅವರನ್ನು ಅಮೆರಿಕದವರು ಸಹ ಮಾರ್ಗದರ್ಶಿಯಾಗಿ ನೋಡುತ್ತಿದ್ದರು.‌ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಕೂಡಾ ಮನಮೋಹನ್ ಸಿಂಗ್ ಅವರು ನಮಗೆ ಪ್ರೇರಣೆ ಎಂದಿದ್ದರು. ಅನೇಕ ರಾಷ್ಟ್ರಗಳು ಅವರನ್ನು ಪ್ರೇರಣೆಯಾಗಿ ತೆಗೆದುಕೊಂಡದ್ದರು.‌ ಅವರ ಅಗಲಿಕೆ ರಾಷ್ಟ್ರಕ್ಕೆ ತುಂಬಲಾರ ನಷ್ಟ ಎಂದು ಎಚ್ ಕೆ ಪಾಟೀಲ್ ಕಂಬನಿ ಮಿಡಿದರು.

ಮನಮೋಹನ್ ಸಿಂಗ್ ಅವರ ನಿಧನಕ್ಕಿಂತ ಮುಂಚೆ ನಾವು ಇನ್ನು ಕಾರ್ಯಕ್ರಮದಲ್ಲಿ ಇದ್ದೇವು. ಅವರಿಗೆ ತೀವ್ರವಾದ ಉಸಿರಾಟದ ತೊಂದರೆ ಇದೆ ಎಂದು ಗೊತ್ತಾದಾಗ ನಾವು ಎಲ್ಲಾ ಕಾರ್ಯಕ್ರಮ ಬಿಟ್ಟು ಬಂದಿದ್ದೇವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಏಮ್ಸ್ ಆಸ್ಪತ್ರೆಯ ನಿರ್ದೇಶಕರ ಜೊತೆ ಮಾತನಾಡಿದಾಗ ಅವರು ನಿಧನ ಹೊಂದಿರುವುದು ಗೊತ್ತಾಯಿತು. ರಾಹುಲ್ ಗಾಂಧಿ ಹಾಗೂ ಮಲ್ಲಿಕಾರ್ಜುನ ಖಾರ್ಗೆ ಅವರು ಈಗಾಗಲೆ ದೆಹಲಿಗೆ ತೆರಳಿದ್ದಾರೆ ಎಂದರು.

Edited By : Somashekar
PublicNext

PublicNext

27/12/2024 10:38 am

Cinque Terre

49.98 K

Cinque Terre

0

ಸಂಬಂಧಿತ ಸುದ್ದಿ