ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಎಸ್​ಐ​, ಲೇಡಿ ಕಾನ್ಸ್‌ಟೇಬಲ್,ಓರ್ವ ಯುವಕನ ಶವ ಕೆರೆಯಲ್ಲಿ ಪತ್ತೆ! ಸಾವಿಗೆ ಕಾರಣವೇನು?

ತೆಲಂಗಾಣದ : ಸಬ್​ ಇನ್ಸ್​ಪೆಕ್ಟರ್​ ಸಾಯಿಕುಮಾರ್, ಬಿಬಿಪೇಟೆಯಲ್ಲಿ ಕೆಲಸ ಮಾಡುತ್ತಿರುವ ಕಾನ್‌ಸ್ಟೆಬಲ್ ಶೃತಿ ಹಾಗೂ ಬಿಬಿಪೇಟೆಯ ಯುವಕ ನಿಖಿಲ್ ಆತ್ಮಹತ್ಯೆ ಜಿಲ್ಲೆಯಲ್ಲಿ ತೀವ್ರ ಸಂಚಲನ ಮೂಡಿಸಿದೆ. ಹೌದು ಪೊಲೀಸ್​​ ಮೂಲಗಳ ಪ್ರಕಾರ, ಜಿಲ್ಲಾಸ್ಪತ್ರೆ ಸಮೀಪದ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 44ರ ಅಡ್ಲೂರು ಎಲ್ಲರೆಡ್ಡಿ ಕೆರೆ ಬಳಿ ಎಸ್‌ಐ ಸಾಯಿಕುಮಾರ್​ ಅವರ ಕಾರು ಪತ್ತೆಯಾಗಿತ್ತು. ಅಲ್ಲದೆ, ಅದೇ ಕೆರೆಯ ಬಳಿ ಚಪ್ಪಲಿ ಸಿಕ್ಕಿದ್ದರಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಶಂಕಿಸಿದ್ದರು.

ಬುಧವಾರ ಸಂಜೆಯಿಂದಲೇ ಮೃತದೇಹಗಳಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಲಾಗಿತ್ತು. ಲೈಫ್ ಗಾರ್ಡ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಕೆರೆಗೆ ನುಗ್ಗಿ ಮೃತದೇಹಗಳನ್ನು ಹೊರತೆಗೆದಿದ್ದಾರೆ.

12.30ಕ್ಕೆ ಕಾನ್‌ಸ್ಟೆಬಲ್ ಶೃತಿ ಮತ್ತು ಯುವಕ ನಿಖಿಲ್ ಶವ ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ಎಸ್‌ಐ ಸಾಯಿಕುಮಾರ್​ ಶವವನ್ನು ಹೊರತೆಗೆಯಲಾಗಿದೆ. ಈಗ ಎಸ್‌ಐ, ಮಹಿಳಾ ಕಾನ್ಸ್‌ಟೇಬಲ್‌ ಹಾಗೂ ಯುವಕರು ಒಟ್ಟಾಗಿ ಕೆರೆ ಹಾರಿದ್ದಾರಾ? ಅವರ ನಡುವಿನ ಜಗಳ ಏನು? ಅವರೇಕೆ ಆತ್ಮಹತ್ಯೆ ಮಾಡಿಕೊಂಡರು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದ್ದು, ಇದ್ಯಾವುದಕ್ಕೂ ಉತ್ತರ ಸಿಕ್ಕಿಲ್ಲ. ಈ ನಿಟ್ಟಿನಲ್ಲಿ ತನಿಖೆ ಆರಂಭವಾಗಿದೆ.

ಎಸ್‌ಐ ಸಾಯಿಕುಮಾರ್ ಈ ಹಿಂದೆ ಬಿಬಿಪೇಟೆ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದರು. ಶ್ರುತಿ ಅಲ್ಲಿ ಕಾನ್ ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದರು. ಈಗಲೂ ಅಲ್ಲಿಯೇ ಕೆಲಸ ಮಾಡುತ್ತಿದ್ದರು. ಬೀಬಿಪೇಟೆ ನಿವಾಸಿ ನಿಖಿಲ್ ಸೊಸೈಟಿಯಲ್ಲಿ ಆಪರೇಟರ್ ಆಗಿ ಕೆಲಸ ಮಾಡುತ್ತಿದ್ದ. ಅಲ್ಲದೆ, ಕಂಪ್ಯೂಟರ್ ರಿಪೇರಿ ಸಹ ಮಾಡುತ್ತಿದ್ದ. ಪೊಲೀಸ್ ಠಾಣೆಯಲ್ಲಿ ಕಂಪ್ಯೂಟರ್​ಗಳಿಗೆ ಏನಾದರೂ ತೊಂದರೆಯಾದರೆ ನಿಖಿಲ್ ಬಂದು ಸರಿಪಡಿಸುತ್ತಿದ್ದ. ಆದರೆ, ಈ ಮೂವರ ಸಾವು ಭಾರಿ ಚರ್ಚೆಯಾಗುತ್ತಿದೆ.

Edited By : Nirmala Aralikatti
PublicNext

PublicNext

26/12/2024 08:51 pm

Cinque Terre

106.68 K

Cinque Terre

1

ಸಂಬಂಧಿತ ಸುದ್ದಿ