ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : 'ಬಿಜೆಪಿಯಲ್ಲಿ ಸುಳ್ಳಿನ ತರಬೇತಿಗೆಂದೆ ಕ್ಲಾಸ್‌ಗಳಿವೆ', RSS ಮೇನ್‌ ಬ್ರ್ಯಾಂಚ್ - ಶಿವರಾಜ ತಂಗಡಗಿ ಕಿಡಿ

ಹುಬ್ಬಳ್ಳಿ: ಸುಳ್ಳಿನ ತರಬೇತಿಗೆಂದೇ ಬಿಜೆಪಿಯಲ್ಲಿ ಪ್ರತ್ಯೇಕ ಕೇಂದ್ರವಿದೆ. ಬಿಜೆಪಿ ಅವರಿಗೆ ಸುಳ್ಳು ಹೇಳಲು ಒಂದು ಕ್ಲಾಸ್ ಇದೆ. ಸುಳ್ಳು ಹೇಳುವ ಟ್ರೈನಿಂಗ್ ಕೊಡಲು ಒಂದು ಇನ್ಸ್ಟಿಟ್ಯೂಟ್ ಇದೆ, ಆ ಇನ್ಸ್ಟಿಟ್ಯೂಟ್‌ನಲ್ಲಿ ಕಲಿತು ಬಂದ ಗಿರಾಕಿ ಸಿಟಿ ರವಿ, ಇನ್ನು ಆ ಇನ್ಸ್ಟಿಟ್ಯೂಟ್ ಆರ್‌ಎಸ್‌ಎಸ್ ಒಂದು ಬ್ರಾಂಚ್, ಅದು ನಾಗಪುರದಲ್ಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಿಗೆ ಕಿಡಿಕಾರಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಾಯಕರು ಸಿಟಿ ರವಿ ಅವರಿಗೆ ಕರೆದು ಬುದ್ಧಿ ಹೇಳೊದು ಬಿಟ್ಟು ಮೆರವಣಿಗೆ ಮಾಡುತ್ತಿದ್ದಾರೆ.‌ ಸಿಟಿ ರವಿ ಮಾಡಿದ್ದೆ ಸರಿ ಎನ್ನುವಂತೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ನ ಟ್ರೈನಿಂಗ್‌ನಲ್ಲಿ ಈ‌ ರೀತಿ ಹೆಣ್ಣು ಮಕ್ಕಳಿಗೆ ಮಾತನಾಡಲು ಹೇಳಿದ್ದಾರಾ..? ಇದೊಂದು ಟ್ರೈನಿಂಗ್ ಕ್ಯಾಂಪಾ.? ಬಿಜೆಪಿ ಮಹಿಳಾ ಮೋರ್ಚಾದಲ್ಲಿರುವ ತಾಯಿಯರೇ ಸಿಟಿ ರವಿಗೆ ಬುದ್ಧಿ ಹೇಳಬೇಕು.

ಸಿಟಿ ರವಿ ಮಾತನಾಡಿದ್ದು, ಇಡೀ ಸದನವೇ ಕೇಳಿದೆ. ಇದಕ್ಕೆ ತಪ್ಪಾಗಿದೆ ಕ್ಷಮೇ ಕೇಳಿ ಮುಂದುವರೆಯಿರಿ,

ಅದು ಬಿಟ್ಟು ನಾನು‌ ಬೆಳಗಾವಿ ಪಾದಯಾತ್ರೆ ಮಾಡತ್ತಿನಿ, ಆಣೆ ಪ್ರಮಾಣ‌ ಮಾಡತ್ತಿನಿ ಅಂದರೆ ಒಳ್ಳೆಯ ಬೆಳವಣಿಗೆ ಅಲ್ಲಾ, ಬಿಜೆಪಿ ಅವರಿಗೆ ಮೊಂಡುತನ ಮಾಡೋದು, ಸುಳ್ಳು ಹೇಳೋದೆ ಕೆಲಸ

ಅಂಬೇಡ್ಕರ್‌ಗೆ ಅಮಿತ್ ಶಾ ಮಾತನಾಡಿದ್ದು‌ ಸರಿನಾ?. ನಾವು ದೇವರ ಹೆಸರು ಹೇಳಿ‌ ಸ್ವರ್ಗ ಸೇರಲ್ಲಾ

ಬಿಜೆಪಿಯವರು, ಭೂಮಿ ಮೇಲೆ ಇರುವ ಎಲ್ಲರೂ ದೇವರ ಹೆಸರು ಹೇಳಿ ಸ್ವರ್ಗ ಸೇರಲಿ.

ನಾವು ಅಂಬೇಡ್ಕರ್ ಹೆಸರು ಹೇಳಿ ಭೂಮಿ ಮೇಲೆ ಇರತ್ತಿವಿ, ಈ ದೇಶಕ್ಕೆ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕೊಡುಗೆ ಏನು..? ಎಂದು ಹುಬ್ಬಳ್ಳಿಯಲ್ಲಿ ಶಿವರಾಜ್ ತಂಗಡಗಿ ಪ್ರಶ್ನಿಸಿದರು.

Edited By : Ashok M
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/12/2024 04:37 pm

Cinque Terre

34.89 K

Cinque Terre

10

ಸಂಬಂಧಿತ ಸುದ್ದಿ