ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿಯಲ್ಲಿ ಅಂಬೇಡ್ಕರ್ ಅವರ ಮನುಸ್ಮೃತಿ ದಹನ ದಿನ ಆಚರಣೆ

ಹುಬ್ಬಳ್ಳಿ: ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ ಅವರು ಮನುವಾದ ಮೌಢ್ಯ ಮತ್ತು ಜಾತಿವಾದವನ್ನು ಹತ್ತಿಕ್ಕಲು 1927 ರಂದು ಮನುಸ್ಮೃತಿಯನ್ನು ದಹಿಸುವ ಮೂಲಕ ಪ್ರತಿಭಟಿಸಿದ ಕುರಿತು, ಇಂದು ಹುಬ್ಬಳ್ಳಿ ದುರ್ಗದ ಬೈಲ್‌ ಸರ್ಕಲ್‌‌ನಲ್ಲಿ ಮನುಸ್ಮೃತಿ ದಹನ ದಿನವನ್ನು ಆಚರಿಸಲಾಯಿತು.

ಸಮತಾ ಸೇನಾ, ಬೀದಿಬದಿ ವ್ಯಾಪಾರಸ್ಥರ ಸಂಘ, ಚರ್ಮಕಾರರ ಸಂಘ, ಮಹಿಳಾ ಸಂಘ, ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳ, ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದೊಂದಿಗೆ ಇಂದು ಮನುವಾದ ಜಾತಿವಾದ ಮತ್ತು ಮೌಢ್ಯಗಳ ವಿರುದ್ದ ಸಂವಿಧಾನ ಶಿಲ್ಪಿಯ ಐತಿಹಾಸಿಕ ಹೋರಾಟದ ಮನುಸ್ಮೃತಿ ದಹನ ದಿನವನ್ನು ಆಚರಿಸಿ, ಜಾತಿವಾದ, ಮನುವಾದ ಮತ್ತು ಮೌಢ್ಯಾಚರಣೆಯ ವಿರುದ್ಧ ಜಾಗೃತಿ ಕಾರ್ಯಕ್ರಮ ಮಾಡಿದರು.

Edited By : Vinayak Patil
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್

25/12/2024 03:32 pm

Cinque Terre

37.02 K

Cinque Terre

0

ಸಂಬಂಧಿತ ಸುದ್ದಿ