ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

Breaking: ಚಾಂಪಿಯನ್ಸ್ ಟ್ರೋಫಿ 2025ರ ಸಂಪೂರ್ಣ ವೇಳಾಪಟ್ಟಿ ಪ್ರಕಟ - ಫೆಬ್ರವರಿ 23ರಂದು ಭಾರತ, ಪಾಕ್‌ ನಡುವೆ ಹಣಾಹಣಿ

ದುಬೈ: ಬಹು ನಿರೀಕ್ಷಿತ ಚಾಂಪಿಯನ್ಸ್ ಟ್ರೋಫಿ 2025ರ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಪಂದ್ಯಾವಳಿಯು 15 ಪಂದ್ಯಗಳನ್ನು ಒಳಗೊಂಡಿದ್ದು, ಪಾಕಿಸ್ತಾನದಾದ್ಯಂತ ಮತ್ತು ದುಬೈನಲ್ಲಿ ಆಡಲಾಗುತ್ತದೆ.

ಪಂದ್ಯಾವಳಿಯು ಫೆಬ್ರವರಿ 19ರಂದು ಪ್ರಾರಂಭವಾಗುತ್ತದೆ, ಅಂತಿಮ ಪಂದ್ಯವು ಮಾರ್ಚ್ 9 ರಂದು ನಡೆಯಲಿದೆ. ಭಾರತವು ಫೆಬ್ರವರಿ 20, 23 ಮತ್ತು ಮಾರ್ಚ್ 2 ರಂದು ದುಬೈನಲ್ಲಿ ಕ್ರಮವಾಗಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳನ್ನು ಎದುರಿಸಲಿದೆ.

ಗುಂಪುಗಳು:

ಗುಂಪು ಎ - ಪಾಕಿಸ್ತಾನ, ಭಾರತ, ನ್ಯೂಜಿಲೆಂಡ್, ಬಾಂಗ್ಲಾದೇಶ

ಗುಂಪು ಬಿ - ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್

ಚಾಂಪಿಯನ್ಸ್ ಟ್ರೋಫಿ ವೇಳಾಪಟ್ಟಿ:

19 ಫೆಬ್ರವರಿ: ಪಾಕಿಸ್ತಾನ ವಿರುದ್ಧ ನ್ಯೂಜಿಲೆಂಡ್, ಕರಾಚಿ, ಪಾಕಿಸ್ತಾನ

20 ಫೆಬ್ರವರಿ: ಬಾಂಗ್ಲಾದೇಶ ವಿರುದ್ಧ ಭಾರತ, ದುಬೈ

ಫೆಬ್ರವರಿ 21: ಅಫ್ಘಾನಿಸ್ತಾನ ವಿರುದ್ಧ ದಕ್ಷಿಣ ಆಫ್ರಿಕಾ, ಕರಾಚಿ, ಪಾಕಿಸ್ತಾನ

ಫೆಬ್ರವರಿ 22: ಆಸ್ಟ್ರೇಲಿಯಾ ವಿರುದ್ಧ ಇಂಗ್ಲೆಂಡ್, ಲಾಹೋರ್, ಪಾಕಿಸ್ತಾನ

23 ಫೆಬ್ರವರಿ: ಪಾಕಿಸ್ತಾನ ವಿರುದ್ಧ ಭಾರತ, ದುಬೈ

ಫೆಬ್ರವರಿ 24: ಬಾಂಗ್ಲಾದೇಶ ವಿರುದ್ಧ ನ್ಯೂಜಿಲೆಂಡ್, ರಾವಲ್ಪಿಂಡಿ, ಪಾಕಿಸ್ತಾನ

ಫೆಬ್ರವರಿ 25: ಆಸ್ಟ್ರೇಲಿಯಾ ವಿರುದ್ಧ ದಕ್ಷಿಣ ಆಫ್ರಿಕಾ, ರಾವಲ್ಪಿಂಡಿ, ಪಾಕಿಸ್ತಾನ

26 ಫೆಬ್ರವರಿ: ಅಫ್ಘಾನಿಸ್ತಾನ ವಿರುದ್ಧ ಇಂಗ್ಲೆಂಡ್, ಲಾಹೋರ್, ಪಾಕಿಸ್ತಾನ

ಫೆಬ್ರವರಿ 27: ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ, ರಾವಲ್ಪಿಂಡಿ, ಪಾಕಿಸ್ತಾನ

ಫೆಬ್ರವರಿ 28: ಅಫ್ಘಾನಿಸ್ತಾನ ವಿರುದ್ಧ ಆಸ್ಟ್ರೇಲಿಯಾ, ಲಾಹೋರ್, ಪಾಕಿಸ್ತಾನ

ಮಾರ್ಚ್ 1: ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್, ಕರಾಚಿ, ಪಾಕಿಸ್ತಾನ

ಮಾರ್ಚ್ 2: ನ್ಯೂಜಿಲೆಂಡ್ ವಿರುದ್ಧ ಭಾರತ, ದುಬೈ

ಮಾರ್ಚ್ 4 : ಸೆಮಿಫೈನಲ್ 1, ದುಬೈ

ಮಾರ್ಚ್ 5 : ಸೆಮಿಫೈನಲ್ 2, ಲಾಹೋರ್, ಪಾಕಿಸ್ತಾನ

ಮಾರ್ಚ್ 9: ಫೈನಲ್, ಲಾಹೋರ್ (ಭಾರತ ಅರ್ಹತೆ ಪಡೆದರೆ ದುಬೈನಲ್ಲಿ ನಡೆಯುತ್ತದೆ)

ಮಾರ್ಚ್ 10: ಮೀಸಲು ದಿನ

Edited By : Vijay Kumar
PublicNext

PublicNext

24/12/2024 07:06 pm

Cinque Terre

27.36 K

Cinque Terre

2

ಸಂಬಂಧಿತ ಸುದ್ದಿ