ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಶ್ವಿನ್ ಬದಲಿಗೆ ಭಾರತ ತಂಡಕ್ಕೆ ಸೇರ್ಪಡೆಗೊಂಡ ಕನ್ನಡಿಗ ತನುಷ್ ಕೋಟ್ಯಾನ್ ಯಾರು ಗೊತ್ತಾ?

ಮೆಲ್ಬೋರ್ನ್‌: ಆಸ್ಟ್ರೇಲಿಯಾ ವಿರುದ್ಧದ ಉಳಿದ ಟೆಸ್ಟ್‌ಗಳಿಗೆ ಆರ್ ಅಶ್ವಿನ್ ಬದಲಿಗೆ ತನುಷ್ ಕೋಟ್ಯಾನ್ ಅವರು ಆಲ್‌ರೌಂಡರ್ ಆಗಿ ಆಯ್ಕೆಯಾಗಿದ್ದಾರೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯ ಮೆಲ್ಬೋರ್ನ್‌ನಲ್ಲಿ 26 ರಂದು ಆರಂಭವಾಗಲಿದೆ. ಈ ಮಧ್ಯೆ, ಕೊನೆಯ 2 ಟೆಸ್ಟ್ ಪಂದ್ಯಗಳಿಗೆ ಭಾರತ ತಂಡವನ್ನು ನಿನ್ನೆ ಪ್ರಕಟಿಸಲಾಗಿದೆ. ಭಾರತದ ಆಟಗಾರ ಅಶ್ವಿನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ಹಿನ್ನೆಲೆಯಲ್ಲಿ, ಅವರ ಸ್ಥಾನಕ್ಕೆ ಉಡುಪಿ ಮೂಲದ ಕನ್ನಡಿಗ ಯುವ ಆಟಗಾರ ತನುಷ್ ಕೋಟ್ಯಾನ್ ಅವರನ್ನು ತಂಡಕ್ಕೆ ಸೇರಿಸಲಾಗಿದೆ.

ತನುಷ್ ಕೋಟ್ಯಾನ್ ಅವರು ಅಕ್ಟೋಬರ್ 16, 1998ರಂದು ಮುಂಬೈನಲ್ಲಿ ಜನಿಸಿದರು. ಅವರು ಮುಂಬೈ ಪರ ದೇಶೀಯ ಕ್ರಿಕೆಟ್ ಆಡುತ್ತಿದ್ದಾರೆ. ಅವರು 33 ಪ್ರಥಮ ದರ್ಜೆ ಪಂದ್ಯಗಳಲ್ಲಿ 101 ವಿಕೆಟ್ ಮತ್ತು 1,525 ರನ್ ಗಳಿಸಿದ್ದಾರೆ.

ಅಶ್ವಿನ್ ಸ್ಥಾನದಲ್ಲಿ ಯಜುವೇಂದ್ರ ಚಾಹಲ್ ಅಥವಾ ಅಕ್ಷರ್ ಪಟೇಲ್ ಆಡಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ತನುಷ್ ಕೋಟ್ಯಾನ್ ಸ್ಥಾನ ಪಡೆದಿದ್ದಾರೆ. 26 ವರ್ಷದ ತನುಷ್ ಕೋಟ್ಯಾನ್ ರಣಜಿ ಟ್ರೋಫಿ ಮತ್ತು ದುಲೀಪ್ ಟ್ರೋಫಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. 2023-24 ರ ರಣಜಿ ಟ್ರೋಫಿಯಲ್ಲಿ ಅವರು ಮುಂಬೈ ತಂಡದ ಪರ ಆಡಿದ್ದರು ಮತ್ತು ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಗೆದ್ದಿದ್ದಾರೆ. ತನುಷ್ ಕೋಟ್ಯಾನ್ ಮೂಲತಃ ಉಡುಪಿ ಜಿಲ್ಲೆಯ ಪಾಂಗಳದವರು.

Edited By : Vijay Kumar
PublicNext

PublicNext

24/12/2024 02:56 pm

Cinque Terre

25.96 K

Cinque Terre

0

ಸಂಬಂಧಿತ ಸುದ್ದಿ