ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು : ಮನಪಾ ಬೀದಿಬದಿ ವ್ಯಾಪಾರ ವಲಯ ಉದ್ಘಾಟನೆ

ಮಂಗಳೂರು : ನಗರದ ಸ್ಟೇಟ್‌ಬ್ಯಾಂಕ್‌‌ನಲ್ಲಿನ ಸರ್ವೀಸ್ ಬಸ್ ನಿಲ್ದಾಣದ ಬಳಿಯಿರುವ ಮನಪಾ ಬೀದಿಬದಿ ವ್ಯಾಪಾರ ವಲಯವನ್ನು ಸೋಮವಾರ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಉದ್ಘಾಟಿಸಿದರು.

ದ.ಕ.ಜಿಲ್ಲಾಡಳಿತ, ಮಂಗಳೂರು ಮನಪಾ ಇವರ ಜಂಟಿ ಆಶ್ರಯದಲ್ಲಿ ದೀನ್ ದಯಾಳ್ ಅಂತ್ಯೋದಯ ಯೋಜನೆ ರಾಷ್ಟ್ರೀಯ ನಗರಜೀವನೋಪಾಯ ಅಭಿಯಾನದ ಬೀದಿಬದಿ ವ್ಯಾಪಾರಿಗಳಿಗೆ ಬೆಂಬಲ ಘಟಕದಡಿ ಬೀದಿಬದಿ ವ್ಯಾಪಾರಸ್ಥರ ವಲಯ ನಿರ್ಮಾಣಗೊಂಡಿದೆ. ಈ ವ್ಯಾಪಾರ ವಲಯದಲ್ಲಿ 93ಮಳಿಗೆಗಳಿವೆ. ಇಂದು ತರಕಾರಿ, ಹಣ್ಣು, ಚಪ್ಪಲಿ, ಬಟ್ಟೆ ವ್ಯಾಪಾರಿಗಳು ವ್ಯಾಪಾರ ನಡೆಸುತ್ತಿರುವ ದೃಶ್ಯ ಕಂಡು ಬಂದಿತು. ಉದ್ಘಾಟನೆ ಬಳಿಕ ಸಚಿವರು ಎಲ್ಲಾ ಮಳಿಗೆಗಳನ್ನು ವೀಕ್ಷಣೆ ಮಾಡಿದರು.

ಈ ಬೀದಿಬದಿ ವ್ಯಾಪಾರಿ ವಲಯ ನಿರ್ಮಾಣಗೊಂಡು ವರ್ಷಗಳೇ ಕಳೆದರೂ ಲೋಕಾರ್ಪಣೆಗೆ ತೊಡಕಾಗಿತ್ತು. ಸೆ.5ರಂದು ಮನಪಾ 93 ವ್ಯಾಪಾರಿಗಳಿಗೆ ಚೀಟಿ ಎತ್ತುವ ಮೂಲಕ ಸ್ಟಾಲ್‌ ಹಸ್ತಾಂತರಿಸಿತ್ತು. ಆದರೆ ಇಲ್ಲಿಯವರೆಗೆ ವಲಯದಲ್ಲಿ ವ್ಯಾಪಾರ ಮಾತ್ರ ಆರಂಭವಾಗಿಲ್ಲ. ವ್ಯಾಪಾರಕ್ಕೆ ವ್ಯಾಪಾರಿ ವಲಯ ಸೂಕ್ತವಾಗಿಲ್ಲ ಎಂದು ವ್ಯಾಪಾರಿಗಳು ವ್ಯಾಪಾರ ನಡೆಸಲು ಹಿಂದೇಟು ಹಾಕುತ್ತಿದ್ದರು. ಆದ್ದರಿಂದ ಇದು ಕುಡುಕರ, ಮದ್ಯವ್ಯಸನಿಗಳ ಅಡ್ಡವಾಗಿ ಪರಿಣಮಿಸಿತ್ತು. ಸದ್ಯ ವ್ಯಾಪಾರ ವಲಯ ಲೋಕಾರ್ಪಣೆಗೊಂಡು ವ್ಯಾಪಾರ ಆರಂಭಗೊಂಡಿದೆ.

Edited By : Suman K
Kshetra Samachara

Kshetra Samachara

23/12/2024 06:51 pm

Cinque Terre

2.34 K

Cinque Terre

1

ಸಂಬಂಧಿತ ಸುದ್ದಿ