ಮುಳಬಾಗಿಲು : ಮುಳಬಾಗಿಲು ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ ವಿವಾದಾಸ್ಪದ ಪ್ರಕರಣಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಲು ಅಧಿಕಾರ ಇಲ್ಲದಿದ್ದರು ವ್ಯಾಪ್ತಿ ಮೀರಿ ವಿಚಾರಣೆ ನಡೆಸಿ ಆದೇಶ ಹೊರಡಿಸಿರುವ ಗ್ರೇಡ್ 2 ತಹಶೀಲ್ದಾರ್ ಬಿ. ಆರ್. ಮುನಿವೆಂಕಟಪ್ಪರನ್ನು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯಕ್ತರು ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತುಗೊಳಿಸಿದ್ದಾರೆ.
ನಗರದ ಸೋಮೇಶ್ವರಪಾಳ್ಯದ ಸ. ನ 27 ರಲ್ಲಿ 3 ಎಕರೆ 6 ಗುಂಟೆ ಜಮೀನಿಗೆ ಶ್ರೀನಿವಾಸ್, ಸೋಮಶೇಖರ್ ಖಾತೆ ಬದಲಾವಣೆಗೆ ಅರ್ಜಿ ಸಲ್ಲಿಸಿದ್ದರು. ಈ ಜಮೀನು ಕುರಿತು ಹಿರಿಯ ಸಿವಿಲ್ ನ್ಯಾಯಾಲಯದಲ್ಲಿ ತಾತ್ಕಾಲಿಕ ತಡೆಯಾಜ್ಞೆ ಇದ್ದರು ತಾಲೂಕು ಕಚೇರಿಯಲ್ಲಿ ವಿವಾದಾಸ್ಪದ ಪ್ರಕರಣ ಎಂದು ದಾಖಲಿಸಿಕೊಂಡು ಜಂಟಿಯಾಗಿ ಖಾತೆ ಮಾಡಲು ಆದೇಶ ಮಾಡಿರುವುದನ್ನು ಪರಿಗಣಿಸಿ ಮುನಿವೆಂಕಟಪ್ಪ ವಿರುದ್ದ ಕ್ರಮ ಜರುಗಿಸಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
Kshetra Samachara
22/12/2024 02:12 pm