Avb
Headline
ಕೋಲಾರ - ಕೆರೆ ಒತ್ತುವರಿ ತೆರವು
ಶ್ರೀನಿವಾಸಪುರ - ಲೋಕಾಯುಕ್ತ ನಿರ್ದೇಶನದಂತೆ ಕೆರೆ ಒತ್ತುವರಿ ತೆರವುಗೊಳಿಸಲಾಗುತ್ತಿದೆ ಎಂದು ತಹಶೀಲ್ದಾರ್ ಸುಧೀಂದ್ರ ಅವರು ತಿಳಿಸಿದರು. ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಕಸಬಾ ಹೋಬಳಿ ಕಲ್ಲೂರು ಗ್ರಾಮದ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರೈತರಿಗೆ ಯಾವುದೇ ತೊಂದರೆ ಮಾಡುವ ಉದ್ದೇಶ ನಮಗಿಲ್ಲ ಆದರೆ ಕೆರೆ ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ರೈತರಿಗೆ ಸೂಚನೆ ಹಾಗೂ ಮಾಹಿತಿ ನೀಡಿದ್ದರೂ ಸಹ ಪದೇ ಪದೇ ಅದನ್ನೇ ಮುಂದುವರಿಸುತ್ತಿರುವ ಕಾರಣ ಒತ್ತುವರಿಯನ್ನು ತೆರವಗೊಳಿಸಲಾಗುತ್ತಿದೆ. ತಾಲ್ಲೂಕಿನಾದ್ಯಂತ ಎಲ್ಲಾ ಕೆರೆಗಳನ್ನು ಸಹ ಸರ್ವೇ ಮಾಡಿ ಒತ್ತುವರಿ ತೆರವುಗೊಳಿಸಲಾಗುತ್ತದೆ ಯಾವುದೇ ರೈತರು ಕೆರೆಗಳನ್ನು ಅತಿಕ್ರಮಣವಾಗಿ ಪ್ರವೇಶ ಮಾಡಿ ಬೆಳೆಗಳನ್ನು ಬೆಳೆದಿದ್ದರೆ ಕೂಡಲೇ ತಾವೇ ಒತ್ತುವರಿ ಕೆರೆಯನ್ನು ತೆರವುಗೊಳಿಸಬೇಕು ಒಂದು ವೇಳೆ ನಾವು ತೆರವುಗೊಳಿಸಲು ಬಂದಂತಹ ಸಂದರ್ಭದಲ್ಲಿ ಯಾವುದೇ ಕಾರಣಕ್ಕೂ ನಾವು ಕಾಲಾವಕಾಶವನ್ನು ನೀಡುವುದಿಲ್ಲ ದಯವಿಟ್ಟು ಕೆರೆಗಳನ್ನು ಉಳಿಸುವಲ್ಲಿ ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
Kshetra Samachara
22/12/2024 01:07 pm