ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲ್ಲಾಪುರ : ಇಡಗುಂದಿ ರಾಮಲಿಂಗೇಶ್ವರ ದೇವಾಲಯದಲ್ಲಿ ಫೆ.7 ರಿಂದ ಮಹಾಯಾಗ - ಆಮಂತ್ರಣ ಬಿಡುಗಡೆ

ಯಲ್ಲಾಪುರ : ಇಡಗುಂದಿ ರಾಮಲಿಂಗೇಶ್ವರ ದೇವಾಲಯದಲ್ಲಿ ಫೆ.7 ರಿಂದ ಮಹಾಯಾಗ - ಆಮಂತ್ರಣ ಬಿಡುಗಡೆ

ಯಲ್ಲಾಪುರ

ತಾಲೂಕಿನ ಇಡಗುಂದಿಯ ರಾಮಲಿಂಗೇಶ್ವರ ದೇವಾಲಯದಲ್ಲಿ ಲೋಕಕಲ್ಯಾಣಾರ್ಥವಾಗಿ ಫೆ.7ರಿಂದ ಫೆ.11 ರವರೆಗೆ ಮಹಾ ಮೃತ್ಯುಂಜಯ ಯಾಗ, ಮಹಾರುದ್ರ ಯಾಗ, ಚಂಡಿ ಹವನ, ಸುಬ್ರಹ್ಮಣ್ಯ ಹವನ, ಧನ್ವಂತರಿ ಹವನ ಮುಂತಾದ ನಾನಾ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಯನ್ನು ದೇವಾಲಯದ ಆವರಣದಲ್ಲಿ ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರಮದ ಸ್ವಾಗತ ಸಮೀತಿಯ ಅಧ್ಯಕ್ಷ ನಾಗೇಶ ಹೆಗಡೆ ಪಣತಗೇರಿ ಮಾತನಾಡಿ, ಪೂಜ್ಯ ಸ್ವರ್ಣವಲ್ಲೀ ಶ್ರೀಗಳ ಮಾರ್ಗದರ್ಶನದಲ್ಲಿ ಲೋಕ ಕಲ್ಯಾಣಾರ್ಥವಾಗಿ ಹಾಗೂ ಇತ್ತೀಚೆಗೆ ಎಲ್ಲೆಡೆ ಹೆಚ್ಚುತ್ತಿರುವ ಕ್ಯಾನ್ಸರ್ ಸೇರಿದಂತೆ ವಿವಿಧ ಮಹಾ ರೋಗಗಳ ನಿವಾರಣೆಗಾಗಿ ಮತ್ತು ಅಡಿಕೆ ಸೇರಿದಂತೆ ನಾನಾ ಬೆಳೆಗಳಿಗೆ ತಗುಲುತ್ತಿರುವ ರೋಗ ಬಾಧೆಗಳ ನಿವಾರಣೆಯ ಸಂಕಲ್ಪದೊಂದಿಗೆ ಈ ಮಹಾಯಾಗಗಳನ್ನು ಆಯೋಜಿಸಲಾಗಿದೆ. ಎಲ್ಲ ಸದ್ಭಕ್ತರೂ ಈ ಕಾರ್ಯಕ್ರಮಕ್ಕೆ ಸಹಕರಿಸಬೇಕು ಎಂದರು.

ಧಾರ್ಮಿಕ ಕಾರ್ಯಕ್ರಮಗಳು, ಸಾಂಸ್ಕೃತಿಕ ಹಾಗೂ ಸಭಾ ಕಾರ್ಯಕ್ರಮಗಳ ಆಯೋಜನೆ, ಸುವಸ್ತುಗಳ ಸಂಗ್ರಹ, ದೇಣಿಗೆ ಸಂಗ್ರಹ ಮುಂತಾದವುಗಳ ಕುರಿತು ಸಭೆಯಲ್ಲಿ ಸಮಗ್ರವಾಗಿ ಚರ್ಚಿಸಲಾಯಿತು.

ಸಭೆಯಲ್ಲಿ ಸ್ವಾಗತ ಸಮಿತಿಯ ಉಪಾಧ್ಯಕ್ಷ ನಾರಾಯಣ ಭಟ್ಟ ಏಕಾನ, ದೇವಾಲಯದ ಪುರೋಹಿತರಾದ ವೇ.ರಾಮಚಂದ್ರ ಭಟ್ಟ, ಪ್ರಮುಖರಾದ ಡಿ.ಶಂಕರ ಭಟ್ಟ, ಮಹಾಬಲೇಶ್ವರ ಭಟ್ಟ, ಅಣ್ಣಯ್ಯ ಭಾಗ್ವತ, ತಿಮ್ಮಣ್ಣ ಭಾಗ್ವತ್, ಸೀತಾರಾಮ ಗಾಂವಕರ್, ಡಾ.ಶಂಕರ ಭಟ್ಟ ಬಾಲಿಗದ್ದೆ, ಜಿ.ಎನ್.ಭಟ್ ತಟ್ಟಿಗದ್ದೆ, ವಿ.ಎನ್.ಭಟ್ಟ ಆರ್ತಿಬೈಲ್,, ವಿ.ಎನ್.ಭಟ್ಟ ಬೆಳ್ಳಿ, ಕೆ.ಜಿ.ಬೋಡೆ, ಎನ್.ಆರ್.ಭಟ್ ಬಿದ್ರೆಪಾಲ್, ಎಸ್.ಎಂ.ಭಟ್ಟ ಮುಂತಾದವರು ವಿವಿಧ ಸಲಹೆ,ಸೂಚನೆ ನೀಡಿದರು. ಗ್ರಾಮಸ್ಥರು, ಅರ್ಚಕರು ಸಾರ್ವಜನಿಕರು ಇದ್ದರು.

Edited By : PublicNext Desk
Kshetra Samachara

Kshetra Samachara

22/12/2024 01:12 pm

Cinque Terre

3.54 K

Cinque Terre

0