ಶ್ರೀನಿವಾಸಪುರ - ಮಾಜಿ ಸ್ಪೀಕರ್ ರಮೇಶ್ ಕುಮಾರ್ ಒತ್ತುವರಿ ಮಾಡಿಕೊಂಡಿದ್ದಾರೆ ಎನ್ನಲಾದ ಅರಣ್ಯ ಜಮೀನು ಜಂಟಿ ಕಾರ್ಯ ಮತ್ತೆ ಮುಂದೂಡಿಕೆಯಾಗಿರುವುದು ಸರ್ಕಾರವೇ ಬಲಾಡ್ಯರ ರಕ್ಷಣೆಗೆ ನಿಂತಿದೆಯೇ ಎಂಬ ಅನುಮಾನಕ್ಕೆ ಆಸ್ಪದ ನೀಡಿದೆ. ಜಿಂಗಾಲಕುಂಟೆ ಅರಣ್ಯ ಜಮೀನು ಜಂಟಿಸರ್ವೆಯನ್ನು ಮಾಡಲು ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಕಂದಾಯ ಇಲಾಖೆ ಅಧಿಕಾರಿಗಳು ಹಾಜರಾಗದ ಕಾರಣ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳ ಪರಿಶೀಲಿಸಿಕೊಂಡು ವಾಪಸ್ ತೆರಳಿದ್ದಾರೆ. ಕೇಂದ್ರದ ಪಾರೆಸ್ಟ್ ಜನರಲ್ ಆಫ್ ಇನ್ಸ್ಪೆಕ್ಟರ್ ಕಳುಹಿಸಿದ್ದ ಪತ್ರದ ಹಿನ್ನೆಲೆಯಲ್ಲಿ ಜಂಟಿ ಸರ್ವೆಗೆ ಎರಡು ಇಲಾಖಾ ಅಧಿಕಾರಿಗಳು ಚರ್ಚಿಸಿಯೆ ದಿನಾಂಕ ನಿಗದಿ ಪಡಿಸಲಾಗಿತ್ತು. ಇದರ ನಡುವೆ ವಿಭಾಗೀಯ ಆಯುಕ್ತರು ಹೊರಡಿಸಿದ ಆದೇಶದಿಂದ ಕಂದಾಯ ಇಲಾಖೆಯ ಅಧಿಕಾರಿಗಳು ಗೈರಾಗಿದ್ದರು.
Kshetra Samachara
21/12/2024 03:26 pm