ಕೋಲಾರ : ಜಾತಿ ಬಿಡಿ, ಮತ ಬಿಡಿ, ಮಾನವೀಯತೆಗೆ ಜೀವ ಕೊಡಿ. ಮಾನವ ಜಾತಿ ಒಂದೆ. ಹಳ್ಳಿಗಳಲ್ಲಿ ಇದನ್ನು ಅರಿತು ಅಣ್ಣ ತಮ್ಮಂದಿರಂತೆ ಬಾಳಬೇಕು. ಮನುಷ್ಯನನ್ನು ಮನುಷ್ಯನಂತೆ ಕಾಣಬೇಕು. ಮೃಗಗಳಂತೆ ಕಾಣಬಾರದು ಎಂದು ಕೋಲಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾ|| ಸುನಿಲ್ ಎಸ್ ಹೊಸಮನಿ ತಿಳಿಸಿದರು. ಕೋಲಾರ ತಾಲ್ಲೂಕು ಅರಾಭಿಕೊತ್ತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಸಮಾಜ ಕಲ್ಯಾಣ ಇಲಾಖೆ ಕೋಲಾರ ಹಾಗೂ ಈನೆಲ ಈಜಲ ಕಲೆ ಮತ್ತು ಸಾಂಸ್ಕøತಿಕ ಸಂಸ್ಥೆ ಚೌಡದೇನಹಳ್ಳಿ ಮತ್ತು ಅರಾಭಿಕೊತ್ತನೂರು ಗ್ರಾಮ ಪಂಚಾಯಿತಿ ಇವರುಗಳ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ಅಸ್ಪøಶ್ಯತಾ ನಿರ್ಮೂಲನೆ ಬಗ್ಗೆ ಅರಿವು, ವಿಚಾರಗೋಷ್ಠಿ, ಕಾರ್ಯಾಗಾರ ಮತ್ತು ಬೀದಿ ನಾಟಕದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಆ ಜಾತಿ-ಈ ಜಾತಿ, ಮೇಲು-ಕೀಲು ಎಂಬ ಮನೋಭಾವ ಬೆಳೆಸಿಕೊಂಡರೆ ಅಟ್ರಾಸಿಟಿ ಕೇಸುಗಳು ಹೆಚ್ಚಾಗುತ್ತದೆ. ಸಾಮಾಜಿಕ ಪಿಡುಗು ಆಗಿರುವ ಅಸ್ಪøಶ್ಯತೆಯ ನಿವಾರಣೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಅಂತರ್ಜಾತಿ ವಿವಾಹಗಳಿಗೆ ಆರ್ಥಿಕ ನೆರವನ್ನು ನೀಡುತ್ತಿದೆ. ಜಾತಿಯ ಯುವಕ ಇತರೆ ಜಾತಿಯ ಹೆಣ್ಣನ್ನು ಮದುವೆಯಾದರೆ 2.50 ಲಕ್ಷ ಪ್ರೋತ್ಸಾಹ ಧನ ಸಿಗುತ್ತದೆ. ಹಾಗೆ ಪರಿಶಿಷ್ಟ ಜಾತಿಯ ಯುವತಿ ಇತರೆ ಜಾತಿಯ ಯುವಕನನ್ನು ಮದುವೆಯಾದರೆ 3 ಲಕ್ಷ ರೂಪಾಯಿಗಳ ಪ್ರೋತ್ಸಾಹ ಧನ ಸಿಗುತ್ತದೆ ಎಂದರು.
Kshetra Samachara
21/12/2024 03:53 pm