ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಿರಿಧಾನ್ಯ ನಡಿಗೆ ಕಾರ್ಯಕ್ರಮಕ್ಕೆ ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಚಾಲನೆ

ಮಡಿಕೇರಿ : ನಗರದ ಕೋಟೆ ಆವರಣದಿಂದ ಗಾಂಧಿ ಮೈದಾನದ ವರೆಗೆ ಕೈಗೊಂಡ ಸಿರಿಧಾನ್ಯ ನಡಿಗೆ ಕಾರ್ಯಕ್ರಮವನ್ನು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಉದ್ಘಾಟಿಸಿದರು.

ಬಳಿಕ ಪಾಕ ಸ್ಪರ್ಧೆ ಕಾರ್ಯಕ್ರಮವನ್ನು ಜಿ.ಪಂ.ಸಿಇಒ ಆನಂದ್ ಪ್ರಕಾಶ್ ಮೀನಾ ಅವರು ಉದ್ಘಾಟಿಸಿ, ಈ ಸ್ಪರ್ಧೆಯಲ್ಲಿ ಭಾಗವಹಿಸಿರುವ ರೈತ ಮಹಿಳೆಯರಿಗೆ ಜಿಲ್ಲಾ ಪಂಚಾಯತ್ ವತಿಯಿಂದ ಎನ್‍ಆರ್‍ಎಲ್‍ಎಂ ಯೋಜನೆಯಡಿ ಸಹಾಯಧನ ನೀಡಿ ಮಾರಾಟಕ್ಕೆ ಸಂಪರ್ಕ ಕಲ್ಪಿಸುವ ಬಗ್ಗೆ ಸಹಕಾರ ನೀಡುವುದಾಗಿ ತಿಳಿಸಿದರು.

ಜಂಟಿ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಏರ್ಪಡಿಸಲಾಗಿದ್ದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯಲ್ಲಿ ಜಿಲ್ಲೆಯ 5 ತಾಲ್ಲೂಕುಗಳಿಂದ ಒಟ್ಟು 58 ಸ್ಪರ್ಧಿಗಳು ಭಾಗವಹಿಸಿ, 90 ಕ್ಕೂ ಹೆಚ್ಚು ತಿನಿಸುಗಳನ್ನು ಪ್ರದರ್ಶಿಸಿರುತ್ತಾರೆ.

ಸಿರಿಧಾನ್ಯದಿಂದ ತಯಾರಿಸಿದ ಸಿಹಿ ತಿನಿಸುಗಳಲ್ಲಿ ಸಿರಿಧಾನ್ಯ ಫಿಗ್(ಅಂಜೂರ) ಡಿಲೈಟ್, ರಾಗಿ ಗಿಣ್ಣು ಹಾಗೂ ಖಾರ ತಿನಿಸುಗಳಲ್ಲಿ ಸಿರಿಧಾನ್ಯ ಪಾಸ್ತಾ ಜೊತೆಗೆ ಕೊಡಗು ಜಿಲ್ಲೆಯ ಮರೆತು ಹೋದ ಖಾದ್ಯಗಳಲ್ಲಿ ಪ್ರಮುಖವಾಗಿ ಎಲಗದ ಮರದ ಚಕ್ಕೆಯ ಗಿಣ್ಣು, ಹುರುಳಿ ಕಡುಬು ಹಾಗೂ ಕೆಂಜಿಗ ಕುಡಿ ಎಲೆ ಚಟ್ನಿ ಪ್ರಮುಖವಾಗಿ ಗಮನಸೆಳೆದವು.

Edited By : PublicNext Desk
Kshetra Samachara

Kshetra Samachara

21/12/2024 11:25 am

Cinque Terre

114.66 K

Cinque Terre

0

ಸಂಬಂಧಿತ ಸುದ್ದಿ