ವಿರಾಜಪೇಟೆ: ವಿರಾಜಪೇಟೆ ಶಾಸಕ ಎ,ಎಸ್. ಪೊನ್ನಣ್ಣ ಅವರು ಸಂತ ಅನ್ನಮ್ಮ ಚರ್ಚ್ ನಲ್ಲಿ ಕ್ರಿಸ್ ಮಸ್ ಹಬ್ಬದ ಆಚರಣೆ ಯಲ್ಲಿ ಬಾಗಿ, ವಿಶ್ವಾದ್ಯಂತ ಇಂದು ಕ್ರಿಸ್ಮಸ್ ಸಂಭ್ರಮ ಮನೆಮಾಡಿದ್ದು ಇದರ ಪ್ರಯುಕ್ತ ಇಂದು ವಿರಾಜಪೇಟೆ ಶಾಸಕರು ಐತಿಹಾಸಿಕ ಪುರಾತನ ಸಂತ ಅನ್ನಮ್ಮ ಚರ್ಚ್ ಗೆ ಭೇಟಿ ನೀಡಿ ಕ್ರೈಸ್ತ ಭಾಂದವರಿಗೆ ಕ್ರಿಸ್ ಮಸ್ ಹಬ್ಬದ ಶುಭಾಶಯ ಸಲ್ಲಿಸಿದರು.
ದಿವ್ಯ ಬಲಿ ಪೂಜೆಗೆ ಆಗಮಿಸಿ ಶಾಸಕ ಪೊನ್ನಣ್ಣ ಅವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ ರೆವರೆಂಡ್ ಫಾದರ್ ಮೊದಲೈ ಮುತ್ತು.ಹಾಗೂ ರೆವರೆಂಡ್ ಫಾದರ್ ಜೇಮ್ಸ್ ಡೋಮಿನಿಕ್ ಅವರು ಶಾಸಕ ರಿಗೆ ಕ್ರತಜ್ಞತೆ ಸಲ್ಲಿಸಿದರು, ನಂತರ ನಿರಾಳದಲ್ಲಿ ಶಾಸಕ ರಿಗೆ ಕೇಕ್ ತಿನ್ನಿಸಿದ ರೆವರೆಂಡ್ ಫಾದರ್ ಗಳು.. ಶಾಸಕರು ಕೂಡ ಫಾದರ್ ಗಳಿಗೆ ಕೇಕ್ ತಿನ್ನಿಸಿ ಶುಭಾಶಯ ಕೋರಿದರು.
Kshetra Samachara
25/12/2024 04:17 pm