ಕುಂದಗೋಳ : ಸಾರ್ವಜನಿಕರಿಗೆ ಸರ್ಕಾರಿ ಸೇವೆ ನೀಡಬೇಕಾದ ನೌಕರರು ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲೇ ಕಳೆದ 14, 10, 9, 6 ವರ್ಷಕ್ಕೂ ಹೆಚ್ಚಾಗಿ ಒಂದೇ ಕಚೇರಿಯಲ್ಲಿ ಸೇವೆ ಸಲ್ಲಿಸುತ್ತಾ ವರ್ಗಾವಣೆ ಭಾಗ್ಯದಿಂದಲೇ ದೂರ ಸರಿದಿದ್ದಾರೆ.
ಹೌದು ! ಸರ್ಕಾರ ಸಾರ್ವಜನಿಕರಿಗೆ ನಿಷ್ಪಕ್ಷಪಾತ ಆಡಳಿತ ವ್ಯವಸ್ಥೆಯ ಸೇವೆ ನೀಡುವ ಉದ್ದೇಶದಿಂದ ಸರ್ಕಾರಿ ನೌಕರರಿಗೆ ಗರಿಷ್ಠ 5 ವರ್ಷ ಕನಿಷ್ಠ 3 ವರ್ಷ ಒಂದೇ ಕಚೇರಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ.
ಆದರೆ ! ಈ ನಿಯಮ ಮಾತ್ರ ಕುಂದಗೋಳ ತಾಲೂಕು ದಂಡಾಧಿಕಾರಿಗಳ ಕಾರ್ಯಾಲಯಕ್ಕೆ ಅನ್ವಯ ಇಲ್ಲವಾ ? ಎಂಬ ಪ್ರಶ್ನೆ ಕಾಡುತ್ತಿದೆ. ಇದಕ್ಕೆ ಮುಖ್ಯ ಕಾರಣವೇ ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲಿ ಕಳೆದ ಹತ್ತು ಹಲವು ವರ್ಷಗಳಿಂದ ಅಧಿಕಾರಿಗಳು ವರ್ಗಾವಣೆ ಭಾಗ್ಯ ಮರೆತು ಒಂದೇ ಕುರ್ಚಿಗೆ ಅಂಟಿಕೊಂಡಿದ್ದಾರೆ.
ಮುಖ್ಯವಾಗಿ ಉಪ ತಹಶೀಲ್ದಾರ್, ಶಿರಸ್ತೇದಾರ್, ಪ್ರಥಮ ದರ್ಜೆ ಲೆಕ್ಕ ಸಹಾಯಕರು, ದ್ವೀತಿಯ ದರ್ಜೆ ಲೆಕ್ಕ ಸಹಾಯಕರಿಗೆ ವರ್ಗಾವಣೆ ಭಾಗ್ಯವೇ ಸಿಕ್ಕಿಲ್ಲಾ. ಮುಖ್ಯವಾಗಿ ಗ್ರಾಮ ಆಡಳಿತಾಧಿಕಾರಿಗಳು ಸಹ ಹಳ್ಳಿ ಮರೆತು ಕಚೇರಿ ಕೆಲಸಕ್ಕೆ ಖಾಯಂ ಆಗಿದ್ದಾರೆ.
ವಿಶೇಷವಾಗಿ ಜನರ ಸರ್ಕಾರಿ ಕೆಲಸಗಳಲ್ಲಿ ಅಧಿಕಾರಿಗಳ ಧೋರಣೆ ಹೆಚ್ಚಾಗಿ ಕಂಡು ಬಂದರೂ, ಯಾವೊಬ್ಬ ಸಾರ್ವಜನಿಕರು ಸಹ ತಮ್ಮ ಕೆಲಸ ಎಲ್ಲಿ ಅರ್ಧಕ್ಕೆ ನಿಲ್ಲುವುದೋ ಎಂಬ ಭಯದಲ್ಲಿ ವ್ಯವಸ್ಥೆ ವಿರುದ್ಧ ದ್ವನಿ ಎತ್ತಲೂ ಸಿದ್ಧರಿಲ್ಲ.
ಇನ್ನೂ ಈ ವಿಷಯ ಜಿಲ್ಲಾಧಿಕಾರಿ ದಿವ್ಯ ಪ್ರಭು, ಸಚಿವ ಸಂತೋಷ್ ಲಾಡ್, ಅಷ್ಟೇ ಯಾಕೆ ? ಸ್ಥಳೀಯ ಶಾಸಕ ಎಂ.ಆರ್.ಪಾಟೀಲ್ ಅವರನ್ನೂ ತಲುಪಿದರು ತಹಶೀಲ್ದಾರ್ ಕಚೇರಿಗೆ ವೃಂದಕ್ಕೆ ಆಪರೇಷನ್ ನಡೆದೆ ಇಲ್ಲಾ.
ಒಟ್ಟಾರೆ ಕುಂದಗೋಳ ತಹಶೀಲ್ದಾರ್ ಕಚೇರಿಯಲ್ಲಿ ಹತ್ತು ಹಲವು ವರ್ಷಗಳಿಂದ ಬೇರು ಬಿಟ್ಟ ಅಧಿಕಾರಿಗಳಿಗೆ ವರ್ಗಾವಣೆ ಭಾಗ್ಯ ಸಿಕ್ಕರೆ ವ್ಯವಸ್ಥೆ ನಿರಾಳವಾಗಲಿದೆ.
ಪಬ್ಲಿಕ್ ನೆಕ್ಸ್ಟ್ ವಿಶೇಷ : ಶ್ರೀಧರ ಪೂಜಾರ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
21/12/2024 09:40 am