ಹಳಿಯಾಳ : ಪಟ್ಟಣದ 110/11 ಕೆ.ವಿ., ಉಪ-ಕೇಂದ್ರ, (ಅಲ್ಲೊಳಿ) ಹಳಿಯಾಳ, ಮತ್ತು 110/11 ಕೆ.ವಿ., ಉಪ-ಕೇಂದ್ರ ಕಾವಲವಾಡದಲ್ಲಿ ತುರ್ತು ವಿದ್ಯುತ್ ದುರಸ್ತಿ ಕಾರ್ಯವಿರುವುದರಿಂದ ಡಿ.21ರಂದು ಬೆಳಗ್ಗೆ 10 ರಿಂದ ಸಂಜೆ 5 :30 ರ ವರೆಗೆ ಹಳಿಯಾಳ ಪಟ್ಟಣ ಹಾಗೂ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
110/11 ಕೆ.ವಿ., ಉಪ-ಕೇಂದ್ರ ಅಲ್ಲೊಳಿ ವ್ಯಾಪ್ತಿಯ ಹಳಿಯಾಳ ಪಟ್ಟಣ, ಯಡೋಗಾ, ಮೋದಲಗೇರಾ, ಕೇಸರೊಳ್ಳಿ, ಚಿಬ್ಬಲಗೇರಿ, ಗುಂಡೋಳ್ಳಿ, ಸಾಂಬ್ರಾಣಿ, ಭಾಗವತಿ, ನಾಗಶೆಟ್ಟಿಕೊಪ್ಪ, ತತ್ವಣಗಿ, ಬಿ.ಕೆ.ಹಳ್ಳಿ, ಹವಗಿ, ಮಂಗಳವಾಡ, ತೇರಗಾಂವ, ಅರ್ಲವಾಡ ಮತ್ತು ಮದ್ನಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ಹಾಗೂ 110/11 ಕೆ.ವಿ., ಉಪ-ಕೇಂದ್ರ ಕಾವಲವಾಡ ವ್ಯಾಪ್ತಿಯ ಮುರ್ಕವಾಡ, ಕಾವಲವಾಡ, ಬೆಳವಟಗಿ, ಜನಗಾ ಮತ್ತು ತಟ್ಟಿಗೇರಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರಾದ ರವೀಂದ್ರ ಮೇಟಗುಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
19/12/2024 07:37 pm