ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಫ್ರಾನ್ಸ್‌ನಲ್ಲಿ ಅಬ್ಬರಿಸಿದ ಅಪಾಯಕಾರಿ ಚಂಡಮಾರುತ - ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ.!

ಮಯೊಟ್ಟೆ: ಮನೆ ಕಳೆದುಕೊಂಡು ಬೀದಿಗೆ ಬಂದ ಬಡ ಜೀವಗಳು.... ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವ ಮನ ಕಲಕುವ ದೃಶ್ಯಗಳು ಕಂಡು ಬಂದಿದ್ದು ಫ್ರಾನ್ಸ್‌ನ ಮಯೊಟ್ಟೆ ದ್ವೀಪದಲ್ಲಿ...

ಹೌದು. ಹಿಂದೂ ಮಹಾಸಾಗರದಲ್ಲಿ ಕಾಣಿಸಿಕೊಂಡ 'ಚಿಡೋ' ಚಂಡಮಾರುತವು ಡಿಸೆಂಬರ್ 14 ಮಯೊಟ್ಟೆ ದ್ವೀಪ ಸಮೂಹದ ಮೇಲೆ ತಪ್ಪಳಿಸಿ ಕ್ರೂರ ಸ್ವರೂಪವನ್ನು ತೋರಿದೆ. ಇದರ ಪರಿಣಾಮ ಒಂದು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ತಾತ್ಕಾಲಿಕ ಟೆಂಟ್‌ಗಳು ನೆಲಸಮಗೊಂಡು ಸ್ಥಳೀಯ ನಿವಾಸಿಗಳ ಬದುಕು ಬೀಗಿದೆ ಬಂದಿದೆ.

ಹೇಳಿ ಕೇಳಿ ಮಯೊಟ್ಟೆ ಫ್ರಾನ್ಸ್‌ನ ಬಡ ದ್ವೀಪ ಪ್ರದೇಶವಾಗಿದೆ. ಇದು ಆಫ್ರಿಕಾದ ಕರಾವಳಿಯ ಆಗ್ನೇಯ ಹಿಂದೂ ಮಹಾಸಾಗರದಲ್ಲಿದೆ. ಬಡ ಜನರ ಬದುಕಿನಲ್ಲಿ ಚಿಡೋ ಚಂಡಮಾರುತವು ಅತಂತ್ರವನ್ನೇ ಸೃಷ್ಟಿಸಿದೆ.

ಚಿಡೋ ಚಂಡಮಾರುತವು ರಾತ್ರಿಯಿಡೀ ಮಯೊಟ್ಟೆಯಲ್ಲಿ ಅಪ್ಪಳಿಸಿದ್ದು, ಗಂಟೆಗೆ 200 ಕಿ.ಮೀ ವೇಗದಲ್ಲಿ ಗಾಳಿ ಬೀಸಿದ್ದು, ತಾತ್ಕಾಲಿಕ ವಸತಿ, ಸರ್ಕಾರಿ ಕಟ್ಟಡಗಳು ಮತ್ತು ಆಸ್ಪತ್ರೆಗೆ ಹಾನಿಯಾಗಿದೆ ಎಂದು ಮೆಟಿಯೊ-ಫ್ರಾನ್ಸ್ ತಿಳಿಸಿದೆ. ಇದು 90 ವರ್ಷಗಳಲ್ಲಿ ದ್ವೀಪಗಳಿಗೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

Edited By : Vinayak Patil
PublicNext

PublicNext

16/12/2024 03:12 pm

Cinque Terre

49.19 K

Cinque Terre

0

ಸಂಬಂಧಿತ ಸುದ್ದಿ