ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು ಸಿದ್ದಗಂಗಾ ಮಠದಿಂದ ದೇಣಿಗೆ ಸಂಗ್ರಹಿಸುತ್ತಿಲ್ಲ - ವದಂತಿಗಳನ್ನು ನಂಬದಂತೆ ಶ್ರೀ ಮಠದ ಸ್ಪಷ್ಟನೆ

ತುಮಕೂರು: ಕೆಲವು ಕಿಡಿಗೇಡಿಗಳು ಶ್ರೀ ಸಿದ್ದಗಂಗಾ ಮಠದ ಹೆಸರು ಹೇಳಿಕೊಂಡು ದೇಣಿಗೆ ಸಂಗ್ರಹ ಮಾಡುವುದು ಹಾಗೂ ಬಂಜೆತನಕ್ಕೆ ಔಷಧ ವಿತರಿಸುತ್ತಿ ರುವುದು ಬೆಳಕಿಗೆ ಬಂದಿದೆ. ಈ ರೀತಿ ಔಷಧ ವಿತರಣೆ ಮಾಡುವ ಸಲುವಾಗಿ ಅಥವಾ ದೇಣಿಗೆ ಸಂಗ್ರಹಿಸುವ ಸಲುವಾಗಿ ಮಠದಿಂದ ಯಾವುದೇ ವ್ಯಕ್ತಿಯನ್ನು ನೀಯೋಜನೆ ಮಾಡಿಲ್ಲ ಎಂದು ಸಿದ್ದಗಂಗಾ ಮಠದ ಆಡಳಿತಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ಕಿಡಿಗೇಡಿಗಳು ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಬಳಿ ಹೋಗಿ, ತಮ್ಮನ್ನು ದೇಣಿಗೆ ಸಂಗ್ರಹ ಮಾಡಲು ಹಾಗೂ ಬಂಜೆತನಕ್ಕೆ ಔಷಧ ವಿತರಣೆ ಮಾಡಲು ಮಠದಿಂದ ನಿಯೋಜನೆ ಮಾಡಲಾಗಿದೆ ಎಂದು ಸುಳ್ಳು ಹೇಳಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ. ಈ ವಂಚಕರ ಮಾತಿಗೆ ಸಾರ್ವಜನಿಕರು ಮೋಸ ಹೋಗಬಾರದು. ಹಿತೈಷಿಗಳು, ದೇಣಿಗೆ ಸಲ್ಲಿಸುವವರು ಮಠಕ್ಕೆ ನೇರವಾಗಿ ಬಂದು ಸಲ್ಲಿಸಬಹುದು ಎಂದು ತಿಳಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

14/12/2024 08:43 am

Cinque Terre

500

Cinque Terre

0

ಸಂಬಂಧಿತ ಸುದ್ದಿ