ಬೆಳಗಾವಿ: ರಾಷ್ಟ್ರದಲ್ಲಿ ಒನ್ ನೇಷನ್ ಒನ್ ಎಲೆಕ್ಷನ್‌ಗೆ ಕೇಂದ್ರ ಸಂಪುಟ ತೀರ್ಮಾನ ಮಾಡಿದೆ. ಕಳೆದ ಎರಡು ತಿಂಗಳ ಹಿಂದೆ ಸಿಎಂ, ಡಿಸಿಎಂ ನಾವೆಲ್ಲ ಪ್ರಧಾನ ಮಂತ್ರಿಗಳನ್ನು ಭೇಟಿ ಮಾಡಿದ್ದೆವು. ಆಗ ಈ ವಿಷಯನ್ನ ಅವತ್ತು ಅವರು ಪ್ರಸ್ತಾಪ ಮಾಡಿದ್ರು .ಅದಕ್ಕೆ ಅನೇಕ ಕಾರಣಗಳನ್ನು ಕೊಟ್ದಿದ್ರು. ಈ ಹಿಂದೆ ಅಸೆಂಬ್ಲಿ ಮತ್ತು ಪಾರ್ಲಿಮೆಂಟ್ ಎಲೆಕ್ಷನ್ ಒಟ್ಟಿಗೆ ಆಗಿತ್ತು. ಆದ್ರೆ ಅದಕ್ಕೆ ಅದರದೇ ಆದ ಸಾಧಕ ಮತ್ತು ಬಾದಕಗಳಿವೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಚರ್ಚೆ ಅಗತ್ಯವಿದೆ.
ಆದ್ರೆ ಅದಕ್ಕೂ ಮೊದಲು ಜನಗಣತಿ ಮಾಡಬೇಕು. ಜನಸಂಖ್ಯೆ ಎಷ್ಟಿದೆ? ಎಷ್ಟು ಮತದಾರರಿದ್ದಾರೆ? ನೋಡಬೇಕು. 2011ರ ನಂತರ ದೇಶದಲ್ಲಿ ಜನಗಣತಿ ಆಗಿಲ್ಲ. ಯಾವುದೇ ತೀರ್ಮಾನಕ್ಕಾದರೂ ಜನಗಣತಿ ಅಗತ್ಯ. ಜನಗಣತಿ ನಂತರ ಮಹಿಳಾ ಮೀಸಲಾತಿ ಮತ್ತು ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆ ತೀರ್ಮಾನ ಮಾಡಬೇಕು ಎಂದು ತಿಳಿಸಿದರು.
PublicNext
13/12/2024 03:19 pm