ಹುಬ್ಬಳ್ಳಿ: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಂದ ಎಡವಟ್ಟು ಮಾಡಿದೆ. ಚಾಲಕ ಹಾಗೂ ನಿರ್ವಾಹಕರ ನೇಮಕಾತಿ ವಿಚಾರದಲ್ಲಿ ಅಧಿಕಾರಿಗಳಿಂದ ಎಡವಟ್ಟು ಮಾಡಿದ್ದು, ಹುಬ್ಬಳ್ಳಿಯಲ್ಲಿ ಚಾಲನಾ ತರಬೇತಿ ಕೇಂದ್ರ ಇದ್ದರೂ ಮತ್ತೊಂದು ಜಿಲ್ಲೆಯಲ್ಲಿ ಚಾಲನಾ ಪರೀಕ್ಷೆಗಾಗಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಧಾರ ಮಾಡಿದೆ.
ಕಳೆದ 2019ರಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿದ್ದ ಸರ್ಕಾರ, 2100 ಹುದ್ದೆಗಳಿಗಾಗಿ ಅಧಿಸೂಚನೆ ಹೊರಡಿಸಲಾಗಿತ್ತು. ನಾಲ್ಕು ವರ್ಷಗಳಿಂದ ಬೇರೆ ಬೇರೆ ಕಾರಣಗಳನ್ನ ಹೇಳಿಕೆ ನೀಡಿ ನೇಮಕಾತಿ ಪ್ರಕ್ರಿಯೆಗೆ ಕೊಕ್ಕೆ ಹಾಕಿತ್ತು. ಇದೇ ಮಾರ್ಚ್ ತಿಂಗಳಿಂದ ಅಧಿಸೂಚನೆ ಪ್ರಕಾರ ಎಲ್ಲ ಪ್ರಕ್ರಿಯೆ ನಡೆಸಿರುವ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯು ಚಾಲಕ ಮತ್ತು ನಿರ್ವಾಹಕರಿಗೆ ಅಂತಿಮ ಹಂತದ ಚಾಲನಾ ಪರೀಕ್ಷೆ ನಡೆಸಲಿದೆ.
ಹೌದು. 2100 ಹುದ್ದೆಗಳಿಗಾಗಿ ಈಗಾಗಲೇ 21 ಸಾವಿರಕ್ಕೂ ಅಧಿಕ ಅಭ್ಯರ್ಥಿಗಳಿಂದ ಅರ್ಜಿ ಸಲ್ಲಿಸಿದ್ದು, ಈ ಪೈಕಿ ನೇಮಕಾತಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳಿಗೆ ಚಾಲನಾ ಪರೀಕ್ಷೆ ನಡೆಸಲಿದೆ. ಆದ್ರೆ ಚಾಲನಾ ಪರೀಕ್ಷೆ ವಿಚಾರದಲ್ಲಿ ದುಂದು ವೆಚ್ಚಕ್ಕೆ ಮುಂದಾಗಿದೆ. ಸ್ಥಳೀಯವಾಗಿ ಸಕಲ ಸೌಲಭ್ಯವಿದ್ದರೂ ಕಲಬುರ್ಗಿ ಜಿಲ್ಲೆಯಲ್ಲಿ ಚಾಲನಾ ಪರೀಕ್ಷೆ ನಡೆಸಲು ಮುಂದಾಗಿದೆ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನೇಮಕಾತಿ ಸಂಖ್ಯೆ: 01/2019ರ ಅಭ್ಯರ್ಥಿಗಳ ಚಾಲನಾ ವೃತ್ತಿ ಪರೀಕ್ಷೆಯನ್ನು ಡಿಸೆಂಬರ್ 14ರಿಂದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಮನಾಬಾದ್ ಪ್ರಾದೇಶಿಕ ತರಬೇತಿ ಕೇಂದ್ರ ಬೀದರ್-ಜಿಲ್ಲೆಯ ಚಾಲನಾ ಪಥದಲ್ಲಿ ಪ್ರಾರಂಭಿಸುತ್ತಿದೆ. ಇನ್ನೂ ಇರೋದನ್ನ ಬಿಟ್ಟ ಮತ್ತೊಂದು ನಿಗಮಕ್ಕೆ ಕೈ ಚಾಚಿದ ಸಂಸ್ಥೆ ಅಧಿಕಾರಿಗಳು, ಹುಬ್ಬಳ್ಳಿಯಲ್ಲಿ 12 ಎಕರೆ ವಿಶಾಲವಾದ ಚಾಲನಾ ತರಬೇತಿ ಕೇಂದ್ರವಿದ್ದರೂ ಕಲಬುರ್ಗಿ ಜಿಲ್ಲೆಯ ಹುಮನಾಬಾದ್ ನಲ್ಲಿ ಚಾಲನಾ ಪರೀಕ್ಷೆ ನಡೆಸಲು ನಿರ್ಧಾರ ಮಾಡಿದ್ದಾರೆ. ಈಗಾಗಲೇ 5 ಕೋಟಿಗೂ ಅಧಿಕ ವೆಚ್ಚದಲ್ಲಿ ಚಾಲನಾ ತರಬೇತಿ ಕೇಂದ್ರ ಸ್ಥಾಪನೆ ಮಾಡಿರುವ ಸಂಸ್ಥೆ, ಕೋಟಿಕೋಟಿ ವೆಚ್ಚದಲ್ಲಿ ಟ್ರ್ಯಾಕ್ ನಿರ್ಮಾಣ ಮಾಡಿದ್ರೂ ಬಳಕೆ ಮಾಡಿಕೊಳ್ಳದ ಸಾರಿಗೆ ಸಂಸ್ಥೆಯ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಇರೋ ವ್ಯವಸ್ಥೆಯನ್ನ ಬಿಟ್ಟು ಮತ್ತೊಂದು ಸಂಸ್ಥೆಯ ವ್ಯಾಪ್ತಿಯಲ್ಲಿ ಪರೀಕ್ಷೆಗೆ ಸಿದ್ಧತೆ ಮಾಡಿದ್ದು,ಈಗಾಗಲೇ ಕೋಟಿ ಕೋಟಿ ನಷ್ಟದಲ್ಲಿ ಮುನ್ನಡೆಯುತ್ತಿರೋ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆಯ ಈ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
11/12/2024 08:43 am