ಯಾದಗಿರಿ: ಕುರಿಗಳ ಹಿಂಡು ಇರುವ ಹಟ್ಟಿಗೆ ತಡರಾತ್ರಿ ನಾಯಿ ದಾಳಿ ನಡೆಸಿ ಸುಮಾರು 20ಕ್ಕೂ ಹೆಚ್ಚು ಮರಿಗಳನ್ನು ಕಚ್ಚಿ ಕೊಂದಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕವಡಿಮಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.
ರೈತ ಪಿಡ್ಡಪ್ಪ ಭೀಮಪ್ಪ ಎನ್ನುವವರಿಗೆ ಸೇರಿದ ಕುರಿಗಳ ಹಟ್ಟಿ ಮೇಲೆ ದಾಳಿ ಮಾಡಿರುವ ನಾಯಿಗಳು, ಕುರಿ ಮರಿಗಳನ್ನು ಕಚ್ಚಿ ಹಾಕಿವೆ. ಜೀವನೋಪಾಯಕ್ಕೆ ಆಸರೆಯಾಗಿದ್ದ ಕುರಿಗಳ ಸಾವಿನಿಂದ ಕಂಗಾಲಾಗಿರುವ ರೈತ ಸರ್ಕಾರದಿಂದ ಸಹಾಯ ಹಸ್ತದ ನಿರೀಕ್ಷೆಯಲ್ಲಿದ್ದಾರೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.
Kshetra Samachara
10/12/2024 12:20 pm