ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕಮಗಳೂರು: ಅತಿ ಅಪರೂಪದ ರಕ್ತ ಕನ್ನಡಿ ಹಾವು ಪ್ರತ್ಯಕ್ಷ!

ಚಿಕ್ಕಮಗಳೂರು: ಉರಗ ಸಂತತಿಯಲ್ಲೇ ಅತಿ ಅಪರೂಪದ ರಕ್ತಕನ್ನಡಿ ಹಾವೊಂದು ಕಳಸ ತಾಲೂಕಿನ ಕಲ್ಮಕ್ಕಿ ಗ್ರಾಮದಲ್ಲಿ ಕಾಣಿಸಿಕೊಂಡಿದೆ. ಈ ಹಾವು ಗಾತ್ರದಲ್ಲಿ ಚಿಕ್ಕದಾಗಿದ್ದರೂ ಹೆಚ್ಚಿನ ಪ್ರಮಾಣದ ವಿಷವನ್ನು ಹೊಂದಿದೆ. ಹಾವಿನ ಮೇಲ್ಭಾಗವು ಕಪ್ಪು ಹಾಗೂ ಕೆಳಭಾಗದಲ್ಲಿ ಕೆಂಪು ಬಣ್ಣದಿಂದ ಕೂಡಿದ್ದು ಈ ಹಾವು ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಅಪರೂಪವಾಗಿ ಕಾಣಸಿಗುತ್ತದೆ. ವಿಶೇಷ ವೆಂದರೆ ಈ ಹಾವು ಉರಗ ತಜ್ಞ ರಿಜ್ವಾನ್ ಅವರ ಮನೆಯಂಗಳದಲ್ಲಿ ಕಾಣಿಸಿಕೊಂಡಿದ್ದು ಇದನ್ನು ರಿಜ್ವಾನ್ ರಕ್ಷಿಸಿದ್ದಾರೆ.

Edited By : Ashok M
PublicNext

PublicNext

09/12/2024 01:59 pm

Cinque Terre

27.98 K

Cinque Terre

0