ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸಾಗರ: ದಿಢೀರ್‌ ವರುಣ ಆಗಮನ!- ಕೆರೆಯಂತಾಯಿತು ಗೋಪಾಲ ಗೌಡ ಕ್ರೀಡಾಂಗಣ

ಸಾಗರ: ದಿಢೀರ್ ಮಳೆರಾಯ ಆರ್ಭಟಿಸುವ ಮೂಲಕ ಸಾಗರದ ಜನತೆಗೆ ಶಾಕ್ ನೀಡಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಶನಿವಾರ ಸಂಜೆ ವರುಣನ ಅಬ್ಬರದಿಂದಾಗಿ ವಾಹನ ಸವಾರರು, ಸಾರ್ವಜನಿಕರು ಕೆಲ ಗಂಟೆಗಳ ಕಾಲ ಕಂಗಾಲಾದರು.

ಬೆಳಗ್ಗೆಯಿಂದ ಬಿಸಿಲಿನ ವಾತಾವರಣವಿದ್ದು, ಮಧ್ಯಾಹ್ನದ ಸುಮಾರಿಗೆ ಮಳೆರಾಯ ಆರ್ಭಟಿಸಲು ಪ್ರಾರಂಭಿಸಿದ. ಮಳೆಯ ಬಿರುಸಿಗೆ ಸಾಗರದ ಬಿ.ಹೆಚ್. ರಸ್ತೆಯ ಚರಂಡಿಗಳು ತುಂಬಿ ತುಳುಕಿ, ಅಶೋಕ ರಸ್ತೆಯಿಡೀ ಕೆರೆಯಂತಾಗಿ, ನೀರು ರಭಸದಿಂದ ಹರಿಯುತ್ತಿರುವುದು ಕಂಡು ಬಂತು.

ಸಾಗರದ ಹೆಸರಾಂತ ಗೋಪಾಲ ಗೌಡ ಕ್ರೀಡಾಂಗಣದಲ್ಲಿ ಯುವಕರು ಕ್ರಿಕೆಟ್ ಆಡುವ ಸಂದರ್ಭದಲ್ಲಿ ಬಂದ ಬಿರುಮಳೆಗೆ ಇಡೀ ಕ್ರೀಡಾಂಗಣವೇ ಕೆಲ ನಿಮಿಷಗಳಲ್ಲಿ ಕೆರೆಯಂತಾಗಿ ಬದಲಾಯಿತು!

Edited By : Ashok M
PublicNext

PublicNext

07/12/2024 10:20 pm

Cinque Terre

32.89 K

Cinque Terre

0