ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಂದೂರು: ಜಿಲ್ಲಾಡಳಿತ ವಿರುದ್ಧ ಪ್ರತಿಭಟನೆ- ರಾಜಕೀಯ ಮುಖಂಡರ ಹೈಡ್ರಾಮಾ

ಬೈಂದೂರು: ಉಡುಪಿ ಜಿಲ್ಲೆಯಾದ್ಯಂತ ಕಳೆದ ಒಂದೂವರೆ ವರ್ಷದಿಂದ ಕೆಂಪುಕಲ್ಲು ಕೋರೆ, ಮರಳು, ಗಣಿಗಾರಿಕೆ ನಡೆಸದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಇಂದು ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ನೇತೃತ್ವದಲ್ಲಿ ತಾಲೂಕು ಲಾರಿ ಮತ್ತು ಕಲ್ಲುಕೋರೆ ಮಾಲೀಕರ ಸಂಘದಿಂದ ಪಕ್ಷಾತೀತವಾಗಿ ಪ್ರತಿಭಟನೆ ನಡೆಯಿತು.

ಪ್ರತಿಭಟನೆ ಪಕ್ಷಾತೀತವಾಗಿ ನಡೆಯುತ್ತಿರುವ ಸಂದರ್ಭದಲ್ಲಿ ಒಂದಷ್ಟು ಗೊಂದಲದ ವಾತಾವರಣ ನಿರ್ಮಾಣವಾಯಿತು.

ಬಿಜೆಪಿ ಶಾಸಕರು ಹಾಗೂ ಕಾರ್ಯಕರ್ತರು, ಸಂಘ- ಸಂಸ್ಥೆಯವರು ಬೈಂದೂರು ತಹಶೀಲ್ದಾರ್ ಕಚೇರಿಗೆ ಸಾಗುವ ವೇಳೆ, ಕಾಂಗ್ರೆಸ್ ಮುಖಂಡರು ಪ್ರತಿಭಟನೆಯ ವಿರುದ್ಧ ಅಸಮಾಧಾನ ಹೊರಹಾಕಿದರು. ಈ ಸಂದರ್ಭ ಪ್ರತಿಭಟನೆ ಗೊಂದಲದ ಗೂಡಾಗಿ ಕೆಲಕಾಲ ಸಂಘರ್ಷದ ವಾತಾವರಣ ಉಂಟಾಗಿತ್ತು.

ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರ ಜಟಾಪಟಿಯಿಂದಾಗಿ ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಗೊಂದಲ ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಸರಕಾರ ಹಾಗೂ ಜಿಲ್ಲಾಡಳಿತ ಯಾವ ಕ್ರಮ ಕೈಗೊಳ್ಳುತ್ತದೆ ಎಂದು ಸಾರ್ವಜನಿಕರು ಹಾಗೂ ಕುಂದಾಪುರ- ಬೈಂದೂರು ತಾಲೂಕಿನ ಮತದಾರರು ರಾಜಕೀಯ ನಾಯಕರಿಗೆ ಹಿಡಿಶಾಪ ಹಾಕಿದರು.

Edited By : Vinayak Patil
PublicNext

PublicNext

07/12/2024 04:51 pm

Cinque Terre

29.17 K

Cinque Terre

1

ಸಂಬಂಧಿತ ಸುದ್ದಿ