ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ದಕ್ಷಿಣ ಕೊಡಗಿನಲ್ಲಿ‌ ಹೆಚ್ಚಾದ ಹುಲಿ ಆತಂಕ, ಅರಣ್ಯ ಇಲಾಖೆಯಿಂದ ಕೂಂಬಿಂಗ್

ಕೊಡಗಿನಲ್ಲಿ ಕಾಡು ಪ್ರಾಣಿಗಳು ಮತ್ತು ಮನುಷ್ಯನ‌ ನಡುವಿನ ಸಂಘರ್ಷ ದಿನದಿಂದ ದಿನಕ್ಕೆ ಹೆಚ್ಚಾಗಿದೆ.‌ ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದ ಹುಲಿ, ಹಸುವನ್ನು ಬಲಿ ಪಡೆದಿದೆ. ತಿಂಗಳಲ್ಲಿ 3 ಹಸುಗಳನ್ನು ಬಲಿ‌ ಪಡೆದಿದ್ದು, ಶಾಲೆ ಪಕ್ಕದಲ್ಲಿ ಕಾಣಿಸಿಕೊಂಡಿದ್ದು ಜನರು ಜೀವಭಯದಲ್ಲಿ ದಿನ ಕಳೆಯುತ್ತಿದ್ದಾರೆ. ಹುಲಿ ಸೆರೆಗೆ ಅರಣ್ಯ ಇಲಾಖೆ ಬಲೆ ಬೀಸಿದೆ.

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲ್ಲೂಕಿನ ಬಿಳ್ಳೂರು ಗ್ರಾಮ ಹಾಗೂ ಸುತ್ತಮುತ್ತಲಿನ ಕಾಫಿ ತೋಟ ಮತ್ತು ಶಾಲೆಗಳ ಪಕ್ಕದಲ್ಲಿ ಕಾಣಿಸಿಕೊಂಡಿದೆ. ತಿಂಗಳಲ್ಲಿ 3 ಹಸುಗಳನ್ನು ಬಲಿ ಪಡೆದು ಕಾಫಿ ತೋಟದಲ್ಲಿ ಸಂಚಾರ ಮಾಡುತ್ತಿದ್ದು ಸ್ಥಳೀಯರು ಆತಂಕಗೊಂಡಿದ್ದಾರೆ. ಹಸು ಬಲಿ ಪಡೆದ ಸ್ಥಳಕ್ಕೆ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ ಮತ್ತು ಆರಣ್ಯ ಇಲಾಖೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಹುಲಿಸೆರೆಗೆ ಅರಣ್ಯ ಇಲಾಖೆ ಮುಂದಾಗಿದ್ದು ಹಸು ಬಲಿ ಪಡೆದ ಎರಡು ಭಾಗದಲ್ಲಿ ಹುಲಿ ಬೋನ್ ಇಡಲಾಗಿದ್ದು ಸಂಚಾರ ಮಾಡುವ ಸ್ಥಳದಲ್ಲಿ ಹಸು ಬಲಿ ಪಡೆದ ಸ್ಥಳದಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಹುಲಿ ಸಂಚಾರದ ಬಗ್ಗೆ ಅರಣ್ಯ ಇಲಾಖೆ ನಿಗಾವಹಿಸಿದ್ದು ಗ್ರಾಮದ ಸುತ್ತಮುತ್ತಲಿನ ಕಾಫಿತೋಟದಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕೊಡಗಿನಲ್ಲಿ ಒಂದು ಭಾಗದಲ್ಲಿ ಹುಲಿ ದಾಳಿ ‌ಮಾಡುತ್ತಿದ್ರೆ ಒಂದು ಭಾಗದಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗಿದೆ. ಕಾಫಿ ತೋಟದಲ್ಲಿ ಗ್ರಾಮದ ಪಕ್ಕದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿದ ಹುಲಿಯನ್ನು ಹಿಡಿಯುವ ಕಾರ್ಯಾಚರಣೆಗೆ ಮುಂದಾಗಿದೆ‌. ಆದ್ರೆ ಹುಲಿ ಮಾತ್ರ ಬೋನಿನತ್ತ ಸುಳಿಯದೇ ಇರೋದು ಅರಣ್ಯ ಇಲಾಖೆಯನ್ನ ನಿದ್ದೆಗೆಡಿಸಿದೆ. ಇದರಿಂದ ಒಬ್ಬೊಬ್ಬರೇ ಓಡಾಡಲು, ಕಾಫಿ ತೋಟದಲ್ಲಿ ಕೆಲಸ ಮಾಡಲು, ಕಾರ್ಮಿಕರು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ.

Edited By : Shivu K
PublicNext

PublicNext

07/12/2024 12:47 pm

Cinque Terre

12.55 K

Cinque Terre

0

ಸಂಬಂಧಿತ ಸುದ್ದಿ