ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಂದಿನಿಂದ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಆರಂಭ

ಬೇಲೂರು : ತಾಲ್ಲೂಕಿನಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ನಿಯಂತ್ರಿಸಲು ರೇಡಿಯೋ ಕಾಲರ್ ಅಳವಡಿಕೆ ಕಾರ್ಯಕ್ಕೆ ಶಾಸಕ ಎಚ್ ಕೆ ಸುರೇಶ್ ಚಾಲನೆ ನೀಡಿದರು.

ಹಾರಂಗಿ, ದುಬಾರೆ, ಮತ್ತಿಗೋಡು ಆನೆ ಶಿಬಿರಗಳಿಂದ ಭೀಮ, ಏಕಲವ್ಯ, ಶ್ರೀರಾಮ, ಲಕ್ಷ್ಮಣ, ಕಂಜನ್ ಹಾಗೂ ಈಶ್ವರ್ ಆನೆಗಳು ಬಿಕ್ಕೋಡು ಸಮೀಪದ ವಾಟೇಹಳ್ಳ ಸಸ್ಯ ಕ್ಷೇತ್ರಕ್ಕೆ ಬಂದಿಳಿದಿವೆ.

ಇಂದು ಓಲ್ಡ್ ಬೆಲ್ಟ್ ಗುಂಪಿನ ಹೆಣ್ಣಾನೆಗೆ ರೆಡಿಯೋ ಕಾಲರ್ ಅಳವಡಿಕೆ ಕಾರ್ಯಾಚರಣೆ ಶುರು ಮಾಡಿದ್ದೇವೆ, ಆನೆ ಸೆರೆ ಹಿಡಿದು ಸ್ಥಳಾಂತರ ಮಾಡಲಾಗುವುದು ಎಂದು ಡಿಎಫ್‌ಒ ಸೌರಭ್ ಕುಮಾ‌ರ್ ತಿಳಿಸಿದರು.

'ಆನೆಗಳ ಕಾಟದಿಂದ ಮಲೆನಾಡು ಭಾಗದ ಜನ ನೊಂದಿದ್ದಾರೆ. ನಾನು ಈ ಬಗ್ಗೆ ಸರ್ಕಾರಕ್ಕೆ ಸಾಕಷ್ಟು ಬಾರಿ ಮನವರಿಕೆ ಮಾಡಿ ಒತ್ತಡ ಹಾಕಿದ್ದೇನೆ. ರೇಡಿಯೋ ಕಾಲರ್ ಅಳವಡಿಸುವ ಬದಲು ಆನೆಗಳನ್ನು ಸ್ಥಳಾಂತರ ಮಾಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು, ಅರಣ್ಯ ಸಚಿವರಿಗೆ ಕೇಳಿಕೊಂಡಿದ್ದೇನೆ' ಎಂದು ಶಾಸಕ ಎಚ್.ಕೆ.ಸುರೇಶ್ ತಿಳಿಸಿದರು.

Edited By : Vinayak Patil
PublicNext

PublicNext

06/12/2024 05:28 pm

Cinque Terre

22.56 K

Cinque Terre

0

ಸಂಬಂಧಿತ ಸುದ್ದಿ