ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು : ವಿದ್ಯಾಧರ್ ಗಡಿಪಾರಿಗೆ ತೆರಲು ಕೊಡವ ಸಂಘ ಒತ್ತಾಯ

ಕೊಡಗು : ಕೊಡಗಿನ ವೀರ ಸೇನಾನಿಗಳಾದ ಜ‌ನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ನವರ ಬಗ್ಗೆ ವಾಟ್ಸಪ್ ಗ್ರೂಪ್ ಮೂಲಕ ಅವಹೇಳನಕಾರಿಯಾಗಿ ಮಾತನಾಡಿರೋದು ಖಂಡನೀಯ ವಿದ್ಯಾಧರ್ ತನಿಖೆಗೆ ಒಳಪಡಿಸಿ ಗಡಿಪಾರು ಮಾಡುವಂತೆ ತೆರಲುಗ್ರಾಮದ ಕೊಡವ ಸಂಘದ ಪ್ರಮುಖರು ಒತ್ತಾಯಿಸಿದ್ದಾರೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡವ ಸಂಘದ ಅಧ್ಯಕ್ಷ ಗೀರಿಶ್ ಪೆಮ್ಮಯ್ಯ ಇಬ್ಬರು ವೀರ ಸೇನಾನಿಗಳು ಯಾವುದೇ ಜನಾಗಂಕ್ಕೆ ಸೇರಿದ ವ್ಯಕ್ತಗಳಲ್ಲಿ. ದೇಶ ಕಂಡ ಮಾಹಾನ್ ನಾಯಕರ ಬಗ್ಗೆ ಅವಹೇಳನ ರೀತಿಯಲ್ಲಿ ಮಾತನಾಡಿರೋದು ಸರಿಯಲ್ಲ.‌

ಹೀಗಾಗಿ ಶ್ರೀಮಂಗ ಠಾಣೆಗೆ ತೆರಳಿ ದೂರು ನೀಡಿದ್ದೇವೆ. ಅವರ ವಿರುದ್ಧ 15 ದಿನದ ಒಳಗಾಗಿ ಕಾನೂನು ಕ್ರಮ ಕೈಗೊಳದಿದಲ್ಲಿ ಹೈಕೋರ್ಟ್ ನಲ್ಲಿ ಸಾರ್ವಜನಿಕ‌ ಹಿತಾಶಕ್ತಿ ಅರ್ಜಿ ಹಾಕಲಾಗುವುದು‌. ಜೊತೆಗೆ ವಕೀಲರಾದ ವಿದ್ಯಾಧರ್ ಕೊಡಗಿನಲ್ಲಿಬ ಜನಾಂಗ ಸಂಘರ್ಷಕ್ಕೆ ಕಾರಣರಾದವರು ಅಲ್ಲದೆ ನಕ್ಸಲ್ ರವರೊಂದಿಗೆ ಸಂಪರ್ಕ ಹೊಂದಿದವಾರಗಿದ್ದು ಇವರ ವಿರುದ್ದ ತನಿಖೆಯಾಗಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತ ಅವಹೇಳನ ರೀತಿಯಲ್ಲಿ ಮಾತನಾಡಿದವರನ್ನ ಜಾಮಿನು ರದ್ದು ಮಾಡಿ ಕೊಡಗಿನಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿದ್ದಾರೆ.

Edited By : Somashekar
PublicNext

PublicNext

02/12/2024 04:19 pm

Cinque Terre

16.18 K

Cinque Terre

0

ಸಂಬಂಧಿತ ಸುದ್ದಿ