ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೊಡಗು: ಸಿದ್ದರಾಮಯ್ಯ ಮಾತು ಒಂದು ದಿನ ನಿಂತ್ತುಹೋಗುತ್ತೆ : ಎ.ಮಂಜು

ಕೊಡಗು : ಮೋದಿಯವರ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 52 ಇಂಚಿನ ಎದೆ ಅಂತ ಹೇಳುತ್ತಿದ್ದರು. ಈಗ ನಿಂತು ಹೋಗಿಲ್ವಾ. ಅದೇ ರೀತಿ ಯಾವತ್ತೋ ಒಂದು ದಿನ ಸಿದ್ದರಾಮಯ್ಯ ಅವರು ಮಾತನಾಡುವುದನ್ನು ನಿಲ್ಲಿಸುತ್ತಾರೆ ಎಂದು ಅರಕಲಗೂಡು ಶಾಸಕ ಎ.ಮಂಜು ಹೇಳಿದರು.

ಮಡಿಕೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಹಾಸನದಲ್ಲಿ ಎಚ್‌ಡಿಡಿ, ಎಚ್‌ಡಿಕೆ ಅಹಂಕಾರ ಮುರಿಯಲು ಕಾಂಗ್ರೆಸ್ ಸ್ವಾಭಿಮಾನಿ ಸಮಾವೇಶ ಮಾಡುತ್ತಿದೆ ಎಂಬ ವಿಚಾರ ಕುರಿತು ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ರಾಜಕಾರಣದಲ್ಲಿ ಬೆಳೆಯಲು ದೇವೇಗೌಡರು ಕಾರಣ. ಯಾಕೆ ಅವರ ಅಹಂಕಾರವನ್ನು ಮುರಿಯಬೇಕು. ರಾಜಕಾರಣದಲ್ಲಿ ಯಾರು ಯಾರಿಗೂ ಶಾಶ್ವತವಲ್ಲ. ಮಿತ್ರರೂ ಅಲ್ಲ. ಶತ್ರುಗಳು ಅಲ್ಲ. ಅಂದು ಮೋದಿಯವರ ಬಗ್ಗೆ ಸಿದ್ದರಾಮಯ್ಯ ಮಾತನಾಡುತ್ತಿದ್ದರು. ಇಂದು ಮಾತನಾಡುತ್ತಿಲ್ಲ. ಅದೇ ರೀತಿ ನಿಂತು ಹೋಗುತ್ತದೆ ಎಂದರು.

ಇದು ಅವರ ಪಕ್ಷದ ಕಾರ್ಯಕ್ರಮ. ಅದನ್ನು ಮಾಡುವುದು ಬೇಡ ಅಂತ ಹೇಳುವುದಕ್ಕೆ ನಾವ್ಯಾರು. ಪಾರ್ಟಿಯಿಂದ ಮಾಡ್ತಾರೋ, ಇಲ್ಲ ಸಿದ್ದರಾಮಯ್ಯನವರ ಸ್ವಂತದ್ದು ಅಂತ ಮಾಡ್ತಾರೋ ನೋಡೋಣ. ಅದು ಮೊದಲು ಗೊತ್ತಾಗಬೇಕು ಎಂದರು.

ಉಪಚುನಾವಣೆ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ಒಬ್ಬರ ಪರ ಮಾತನಾಡುವುದು, ವಿರುದ್ಧ ಮಾತನಾಡುವುದು ಸಹಜ. ಅದೇ ರೀತಿ ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ಗೆದ್ದಿದ್ದೇವೆ ಅಂತ ಬೀಗುವುದು ಒಳ್ಳೆಯದಲ್ಲ. ಉಪಚುನಾವಣೆಗಳು ಸರ್ಕಾರದ ಪರ ಇರುವುದು ಸಹಜ. ಚುನಾವಣೆ ಗೆದ್ದ ತಕ್ಷಣ ಹೀಗೆ ಮಾತನಾಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.

Edited By : Manjunath H D
PublicNext

PublicNext

01/12/2024 01:12 pm

Cinque Terre

26.11 K

Cinque Terre

2

ಸಂಬಂಧಿತ ಸುದ್ದಿ