ಶಿವಮೊಗ್ಗ : ನಿನ್ನೆ ಶನಿವಾರ ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿ ಶೀಟರ್ ರಾಜೇಶ್ ಬರ್ಬರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, 4 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ಬೊಮ್ಮನಕಟ್ಟೆಯಲ್ಲಿ ನಡೆದಿದ್ದ ರೌಡಿ ಶೀಟರ್ ರಾಜೇಶ್ ಶೆಟ್ಟಿ ಮರ್ಡರ್ ಆಗಿದ್ದು, ಈ ಸಂಬಂಧ, ಆರೋಪಿಗಳಿಗೆ ಶಿವಮೊಗ್ಗ ವಿನೋಬನಗರ ಠಾಣೆ ಪೊಲೀಸರು, ಬಲೆ ಬೀಸಿದ್ದರು. ಅಲ್ಲದೇ, ಹಾಡಹಗಲೇ ಮರ್ಡರ್ ಮಾಡಿ ಪರಾರಿಯಾಗಿದ್ದರು.
ನಾಗರಾಜ್, ಗಣೇಶ, ವೆಂಕಟೇಶ್, ಕಿರಣ್ ಗೌಡ ಈ ನಾಲ್ವರು ಆರೋಪಿಗಳು ಪರಾರಿಯಾಗಿದ್ದು, ಪೊಲೀಸರ ಬಲೆಗೆ ಬಿದ್ದಿದ್ದಾರೆ. ಇನ್ನುಳಿದಿಬ್ಬರಾದ ಕರಿಯ ವಿನಯ್, ಡಿಂಗ ದೀಪು ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಇನ್ನು ನಾಲ್ವರು ಆರೋಪಿಗಳನ್ನು ಕರೆ ತಂದ ಪೊಲೀಸರು, ಬೊಮ್ಮನಕಟ್ಟೆ ಕೊಲೆ ನಡೆದ ಸ್ಥಳದಲ್ಲಿ ಮಹಜರು ನಡೆಸಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲು ತಯಾರಿ ನಡೆಸಿದ್ದಾರೆ
PublicNext
01/12/2024 05:21 pm