ತುಮಕೂರು: ಪಾವಗಡ ತಾಲ್ಲೂಕಿನ ನಿಡಗಲ್ ಹೋಬಳಿಯ ಗುಜ್ಜನಡು ಕೊಣನಕುರಿಕೆ ಗ್ರಾಮದಲ್ಲಿ ಬಿಸಿಯೂಟದೊಂದಿಗೆ ದುರ್ವಾಸನೆ ಹಾಗೂ ಹುಳ ಬಿದ್ದಿದ್ದ ಚಿಕ್ಕಿ ತಿಂದು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 40ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊಟ್ಟೆನೊವಿನಿಂದ ವಾಂತಿ ಮಾಡಿಕೊಂಡು ಅಸ್ವಸ್ಥಗೊಂಡ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತುರ್ತು ಆಂಬ್ಯುಲೆನ್ಸ್ ಸೇವೆ ಸಿಗದ ಕಾರಣ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯ ಎಚ್ಚೆತ್ತುಕೊಂಡು ಹೊಟ್ಟೆನೋವಿನಿಂದ ನರಳಾಡುತ್ತಿದ್ದ ಮಕ್ಕಳನ್ನು ಖಾಸಗಿ ಕಾರಿನಲ್ಲಿ ಪಟ್ಟಣದ ತಾಯಿ ಮತ್ತು ಮಕ್ಕಳ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಯಿತು.
40 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪಟ್ಟಣದ ಮಕ್ಕಳ ಹಾಗೂ ತಾಯಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವಿದ್ಯಾರ್ಥಿಗಳಿಗೆ ಬಿಸಯೂಟದೊಂದಿಗೆ ನೀಡಿದ್ದ ಚಿಕ್ಕಿ ದುರ್ವಾಸನೆಯಿಂದ ಕೂಡಿದ್ದು ಹಾಗೂ ಹುಳು ಸಿಕ್ಕಿದೆ, ಇದರಿಂದಲೇ ಮಕ್ಕಳಿಗೆ ಬಿಸಿಯೂಟ ಸೇವನೆ ನಂತರ ತಕ್ಷಣವೇ ಹೊಟ್ಟೆನೋವು ಕಾಣಿಸಿಕೊಂಡು ವಾಂತಿಯಾಗಿದೆ ಎಂದು ಶಂಕಿಸಲಾಗಿದೆ.
ಈ ವಿಷಯ ಗ್ರಾಮದಲ್ಲಿ ಹರಡುತ್ತಿದ್ದಂತೆ ಕೂಲಿಕೆಲಸ ಮಾಡಿಕೊಂಡಿದ್ದ ಪಾಲಕರು, ಪೋಷಕರು ಆಸ್ವತ್ರೆ ಬಳಿ ಜಮಾಯಿಸಿದರು. ವಿಷಯ ತಿಳಿಯುತಿದ್ದಂತೆ ತಾಲ್ಲೂಕು ಮಟ್ಟದ ಅಧಿಕಾರಿಗಳಾದ ತಹಶೀಲ್ದಾರ್ ವರದರಾಜು,ಇ.ಒ ಜಾನಕೀರಾಮ್, ಕ್ಷೇತ್ರ ಶಿಕ್ಷಣಾಧಿಕಾರಿ ಇಂದ್ರಾಣಮ್ಮ, ಅಕ್ಷರ ದಾಸೋಹ ವ್ಯವಸ್ಥಾಪಕ ಶಂಕರಪ್ಪ ಇನ್ನಿತರೆ ಅಧಿಕಾರಿಗಳು ಆಸ್ಪತ್ರೆಗೆ ಬೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು.
PublicNext
30/11/2024 08:33 am