ಶ್ರೀನಿವಾಸಪುರ : 2020 ರಿಂದ ಎನ್ಇಪಿ ಪ್ರಾರಂಭದಿಂದ ಇಲ್ಲಿಯವರೆಗೆ ಪದವಿ ವಿದ್ಯಾರ್ಥಿಗಳ ಮುದ್ರಣ ಅಂಕ ಪಟ್ಟಿಗಳನ್ನು ನೀಡುವಂತೆ ಒತ್ತಾಯಿಸಿ ಭಾರತ ವಿದ್ಯಾರ್ಥಿ ಪೆಡರೇಷನ್ ಎಸ್ಎಫ್ಐ ವತಿಯಿಂದ ಶ್ರೀನಿವಾಸಪುರ ತಾಲೂಕು ದಂಡಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಎಫ್ ಐ ಜಿಲ್ಲಾ ಕಾರ್ಯದರ್ಶಿಯಾದ ಸುರೇಶ್ ಬಾಬು ಮಾತನಾಡಿ, ರಾಜ್ಯದಲ್ಲಿ ಎನ್ಇಪಿ 2020 ಜಾರಿಯಾದ ನಂತರ ಸುಮಾರು 22 ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳು ಸುಮಾರು 51 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಅಂಕಪಟ್ಟಿ ವಿತರಣೆಯಾಗಿಲ್ಲ. ಪ್ರಸ್ತುತ ರಾಜ್ಯ ಸರ್ಕಾರ ರಾಜ್ಯದಲ್ಲಿ NEP ರದ್ದುಗೊಳಿಸಿ SEP ಜಾರಿಗೋಳಿಸಿದೆ ಆದರೆ SEP ವಿದ್ಯಾರ್ಥಿಗಳಿಗೂ ಸಹ ಅಂಕಪಟ್ಟಿ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು .
Kshetra Samachara
28/11/2024 06:56 pm