ಕೋಲಾರ : ಕೆಲವರು ಅರೆ ಬರೆಯಾಗಿ ಅರಣ್ಯ ಕಾಯಿದೆ ಓದಿಕೊಂಡು ಇಲ್ಲಸಲ್ಲದ ಕಿರಿಕಿರಿ ಉಂಟು ಮಾಡುತ್ತಿದ್ದಾರೆ ಎಂದು ಕೋಲಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡು ಕೊಂಡಲು ಅವರು ತಿಳಿಸಿದರು.
ನಗರದ ತಮ್ಮ ಕಚೇರಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು ಮುಳಬಾಗಿಲು ತಾಲೂಕು ಕಗ್ಗಲನತ್ತ ಸರ್ವೆ ನಂಬರ್ 2 ರ 450 ಎಕರೆಯಲ್ಲಿ 200 ಎಕರೆಯನ್ನು 1964 ರಲ್ಲಿ ಕೋಲಾರ ಜಿಲ್ಲಾಧಿಕಾರಿಗಳು ಅರಣ್ಯೀಕರಣಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರ ಮಾಡಿದ್ದಾರೆ 1966 ರಲ್ಲಿ ಜಂಟಿ ಸರ್ವೆ ಮಾಡಿ ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿತ್ತು 200 ಎಕರೆಯಲ್ಲಿ 171 ಎಕರೆ ಜಾಗ ಮಾತ್ರ ಅರಣ್ಯೀಕರಣಕ್ಕೆ ಸೂಕ್ತವಾಗಿದ್ದ ಹಿನ್ನೆಲೆಯಲ್ಲಿ ಆಗಲೇ ಅರಣ್ಯ ಇಲಾಖೆ ಯು ನೀಲಗಿರಿ, ಹೊಂಗೆ, ಅಕೇಶಿಯಾ ಸೇರಿದಂತೆ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದೆ ಜೊತೆಗೆ 1975 ರಲ್ಲಿ ಕಗ್ಗಲನತ್ತ ಅರಣ್ಯ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಣೆ ಮಾಡಲಾಗಿದೆ. ಕಂದಾಯ ಮತ್ತು ಅರಣ್ಯ ಇಲಾಖೆ ಕಾಯ್ದೆ ಪ್ರಕಾರ ಈ ಭೂಮಿ ಸಂರಕ್ಷಿತ ಅರಣ್ಯವಾಗಿದೆ ಆದರೂ ಕೆಲವರು ಅಮಾಯಕ ಗ್ರಾಮಸ್ಥರನ್ನು ಎತ್ತಿ ಕಟ್ಟಿ ಅರಣ್ಯ ಇಲಾಖೆ ಜಮೀನಿಗೆ ಅಕ್ರಮ ಪ್ರವೇಶ ಮಾಡಿಸಿದ್ದಾರೆ.
ಈ ಕುರಿತು ಅಮಾಯಕರಿಗೆ ತಿಳುವಳಿಕೆ ನೀಡಲಾಗಿದೆ. ಮತ್ತು ಕಳೆದ ಕೆಲವು ದಿನಗಳಿಂದ ಕೇವಲ ಕುಮ್ಮಕ್ಕು ನೀಡುವುದನ್ನೇ ಅಭ್ಯಾಸ ಮಾಡಿಕೊಂಡು ಅರಣ್ಯ ಭೂಮಿ ಕಬಳಿಕೆಗೆ ಕಾರಣರಾಗಿರುವವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
PublicNext
27/11/2024 12:43 pm