ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗದಗ : ಮಕ್ಕಳ ಆರೋಗ್ಯದ ಬಗ್ಗೆ ಪೋಷಕರು ಕಾಳಜಿ ವಹಿಸಿ

ಗದಗ : ಶುದ್ಧ ನೀರು, ಪೌಷ್ಠಿಕ ಆಹಾರ ಮಕ್ಕಳಿಗೆ ಕೊಡಬೇಕು, ಮಕ್ಕಳ ಆರೋಗ್ಯದ ಬಗ್ಗೆ ಪಾಲಕರು,ಪೋಷಕರು ಕಾಳಜಿ ವಹಿಸಬೇಕು. ಎಂದು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರ ಡಾ.ಪ್ರವೀಣ ತುಪ್ಪದ ಹೇಳಿದರು.

ಮುಳಗುಂದ ಅಂಜುಮನ್ ಎ ಇಸ್ಲಾಂ ಸಂಸ್ಥೆಯ ಪ್ರಾಥಮಿಕ ಶಾಲೆಯಲ್ಲಿ ಅಂಜುಮನ್ ಸಂಸ್ಥೆ ವತಿಯಿಂದ ನಡೆದ ಮಕ್ಕಳ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶುಚಿತ್ವವಿಲ್ಲದ ತಿಂಡಿ ತಿನುಸುಗಳನ್ನ ಮಕ್ಕಳಿಗೆ ಕೊಡಿಸಬೇಡಿ,ಅಶುದ್ಧ ನೀರು ಬಳಕೆಯಿಂದ ಕಾಯಿಲೆಗಳು ಬರುತ್ತವೆ. ಹೀಗಾಗಿ ಮಕ್ಕಳ ಬಗೆಗೆ ಹೆಚ್ಚು ಜಾಗರೂಕತೆ ವಹಿಸುವದು ಮುಖ್ಯವಾಗಿದೆ ಎಂದು ಹೇಳಿದ್ದರು.

ಕಾರ್ಯಕ್ರಮದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ತಾಜುದ್ದಿನ ಕಿಂಡ್ರಿ, ಉಪಾಧ್ಯಕ್ಷ ಎ.ಡಿ.ಮುಜಾವರ,ಹೈದರಲಿ ಖವಾಸ, ದಾವೂದ ಜಮಾಲಸಾಬನವರ,ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ,ಶಾಲೆಯ ಶಿಕ್ಷಕರು ಇದ್ದರು.

Edited By : PublicNext Desk
Kshetra Samachara

Kshetra Samachara

27/11/2024 03:27 pm

Cinque Terre

6.94 K

Cinque Terre

0

ಸಂಬಂಧಿತ ಸುದ್ದಿ