ಹಿರಿಯೂರು : ಜವನಗೊಂಡನಹಳ್ಳಿ ಹೋಬಳಿಯ 16 ಕೆರೆಗಳಿಗೆ ನೀರು ಹರಿಸುವಂತೆ ಆಗ್ರಹಿಸಿ, ರೈತರು ನಡೆಸುತ್ತಿರುವ ಹೋರಾಟಕ್ಕೆ 160 ದಿನಗಳು ಪೂರೈಸಿದೆ. ಈ ವೇಳೆ ಮಾತಾಡಿದ ರೈತ ಮುಖಂಡ ಕೆ ಟಿ ತಿಪ್ಪೇಸ್ವಾಮಿ, ಹೋಬಳಿಯ ಕೆರೆಗಳಿಗೆ ನೀರು ತುಂಬಿಸುವಂತೆ ಸುಮಾರು ಹಲವು ತಿಂಗಳಿಂದ ವಿವಿಧ ರೀತಿಯ ಚಳುವಳಿ ನಡೆಸುವ ಮೂಲಕ, ಸರ್ಕಾರದ ಗಮನ ಸೆಳೆದರು ಇದುವರೆಗೂ ಸರ್ಕಾರ ಸ್ಪಂದಿಸದೆ ಇರುವುದರಿಂದ, ಡಿಸೆಂಬರ್ 9ರಂದು ಚಳಿಗಾಲದ ಅಧಿವೇಶನ ಪ್ರಾರಂಭವಾಗುವುದರಿಂದ ಸರ್ಕಾರದ ಮೇಲೆ ಒತ್ತಡ ತರುವ ಉದ್ದೇಶದಿಂದ ಡಿಸೆಂಬರ್ 9ರಂದು ಹಿರಿಯೂರು ಬಂದ್ ಮಾಡಲು ನಿರ್ಧಾರ ಮಾಡಿದ್ದೇವೆ ಎಂದರು.
Kshetra Samachara
26/11/2024 07:27 pm