ಮೊಳಕಾಲ್ಮುರು : ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ನವಜಾತ ಶಿಶು ಸಪ್ತಾಹ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ತಹಶೀಲ್ದಾರ್ ಜಗದೀಶ್ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಧಿಕಾರಿಗಳಾದ ಡಾ. ಮಧುಕುಮಾರ್ ಮಾತನಾಡಿ, ನವಜಾತ ಶಿಶು ಸಪ್ತಾಹವು 2014 ರಿಂದಲೂ ಆಚರಣೆಗೆ ಬಂದಿದ್ದು, ಈ ವರ್ಷದಿಂದ ಘೋಷವಾಕ್ಯ " ಸುರಕ್ಷತೆ, ಗುಣಮಟ್ಟತೆ, ಉತ್ತಮ ಆರೈಕೆ, ನವಜಾತ ಶಿಶುವಿನ ಹಕ್ಕು ಆಗಿದೆ". ನವಜಾತ ಶಿಶು ಸಪ್ತಾಹದ ಮುಖ್ಯ ಉದ್ದೇಶ ಹುಟ್ಟಿದ ದಿನದಿಂದ 28 ತಿಂಗಳುಗಳವರೆಗೆ ಇವರು ಮಗುವನ್ನು ಸೂಕ್ತವಾಗಿ ಆರೈಕೆ ಮಾಡುವುದು. ತಾಯಿಯ ಎದೆ ಹಾಲು ಕುಡಿಸುವುದು, ರೋಗ ಲಕ್ಷಣಗಳನ್ನು ಪ್ರಾರಂಭಿಕ ಹಂತದಲ್ಲಿಯೇ ಗುರುತಿಸಿ, ಅವುಗಳ ಬಗ್ಗೆ ಮಾಹಿತಿ ನೀಡಿ, ಚಿಕಿತ್ಸೆ ಕೊಡಿಸಬೇಕು ಎಂದರು.
ಕಾರ್ಯಕ್ರಮದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಮಂಜುನಾಥ್, ಸೂಪರಿಡೆಂಟ್ ಪ್ರೇಮ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಾರುತಮ್ಮ ಸಿಹೆಚ್‌ಓ ರಾಗಿಣಿ, ಆಶಾಕಾರ್ಯಕರ್ತೆಯರು ಮತ್ತು ತಾಯಂದಿರು ಹಾಜರಿದ್ದರು.
Kshetra Samachara
26/11/2024 02:01 pm