ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಐಪಿಎಲ್‌ ಮೆಗಾ ಹರಾಜಿನಲ್ಲಿ ಮಹಾ ಮೋಸ - ಸ್ಟಾರ್‌ ಆಟಗಾರನ್ನೇ ಕೈಬಿಟ್ಟ ಪ್ರಾಂಚೈಸಿಗಳು !

ಐಪಿಎಲ್ : ಮೆಗಾ ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಆಸ್ಟ್ರೇಲಿಯಾ ತಂಡದ ಮಾಜಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಿಲ್ಲ. ಹೀಗಾಗಿ ಮುಂಬರುವ ಐಪಿಎಲ್​ನಲ್ಲಿ ಆಸೀಸ್​ನ ಎಡಗೈ ದಾಂಡಿಗ ಕಾಣಿಸಿಕೊಳ್ಳುವುದಿಲ್ಲ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18 ಮೆಗಾ ಆಕ್ಷನ್​ನಲ್ಲಿ ಒಟ್ಟು 182 ಆಟಗಾರರು ಹರಾಜಾಗಿದ್ದಾರೆ. ಈ ಆಟಗಾರರಲ್ಲಿ ಅತ್ಯಧಿಕ ಮೊತ್ತ ಪಡೆದ ಪ್ಲೇಯರ್ ರಿಷಭ್ ಪಂತ್. ಟೀಮ್ ಇಂಡಿಯಾ ವಿಕೆಟ್ ಕೀಪರ್​​ನನ್ನು ಲಕ್ನೋ ಸೂಪರ್ ಜೈಂಟ್ಸ್ ಬರೋಬ್ಬರಿ 27 ಕೋಟಿ ರೂ. ನೀಡಿ ಖರೀದಿಸಿದೆ. ಆದರೆ ಮತ್ತೊಂದೆಡೆ ಸ್ಟಾರ್ ಆಟಗಾರ ಡೇವಿಡ್ ವಾರ್ನರ್ ಮಾರಾಟವಾಗದೇ ಉಳಿದಿದ್ದಾರೆ.

2 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ವಾರ್ನರ್ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಆಸಕ್ತಿ ತೋರಲಿಲ್ಲ. ಅದರಲ್ಲೂ ಅಂತಿಮ ಸುತ್ತಿನ ಶಾರ್ಟ್ ಲಿಸ್ಟ್​​ನಲ್ಲೂ ವಾರ್ನರ್​ಗೆ ಸ್ಥಾನ ಲಭಿಸಿಲ್ಲ. ಈ ಮೂಲಕ ಡೇವಿಡ್ ವಾರ್ನರ್ ಅನ್​ಸೋಲ್ಡ್ ಆಗಿಯೇ ಉಳಿದಿದ್ದಾರೆ.

ಕಳೆದ ಸೀಸನ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದ ವಾರ್ನರ್​​​ ಈ ಬಾರಿ ಕೂಡ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದರು. ಆದರೆ 38 ವರ್ಷದ ವಾರ್ನರ್​ ಅವರ ಖರೀದಿಗೆ ಯಾವುದೇ ಫ್ರಾಂಚೈಸಿ ಮುಂದಾಗಲಿಲ್ಲ. ಇದರೊಂದಿಗೆ ಐಪಿಎಲ್​ನಲ್ಲಿ ವಾರ್ನರ್ ಅವರ ಯುಗಾಂತ್ಯವಾಗಿದೆ ಎಂದೇ ಹೇಳಬಹುದು.

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಸನ್​ರೈಸರ್ಸ್ ಹೈದರಾಬಾದ್ ಪರ ಕಣಕ್ಕಿಳಿದಿರುವ ಡೇವಿಡ್ ವಾರ್ನರ್ 184 ಪಂದ್ಯಗಳನ್ನಾಡಿದ್ದಾರೆ. ಈ ವೇಳೆ 4 ಶತಕ ಹಾಗೂ 62 ಅರ್ಧಶತಕಗಳೊಂದಿಗೆ ಒಟ್ಟು 6565 ರನ್ ಕಲೆಹಾಕಿದ್ದಾರೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಅತ್ಯಧಿಕ ರನ್ ಗಳಿಸಿದ ವಿದೇಶಿ ಬ್ಯಾಟರ್ ಎನಿಸಿಕೊಂಡಿದ್ದಾರೆ.

Edited By :
PublicNext

PublicNext

26/11/2024 04:41 pm

Cinque Terre

7.13 K

Cinque Terre

0

ಸಂಬಂಧಿತ ಸುದ್ದಿ