ಐಪಿಎಲ್ : ಮೆಗಾ ಹರಾಜಿನಲ್ಲಿ ಅನೇಕ ಬಿಗ್ ಸ್ಟಾರ್ ಗಳು ಮಾರಾಟವಾಗದೆ ಉಳಿದಿದ್ದಾರೆ. ಕೆಲವರು ಮೊದಲ ಸುತ್ತಿನಲ್ಲಿ ಅನ್ಸೋಲ್ಡ್ ಆಗಿ, ಕೊನೆಯಲ್ಲಿ ಮಾರಾಟವಾಗಿದ್ದಾರೆ. ಈ ಪಟ್ಟಿಯಲ್ಲಿ ಟೀಂ ಇಂಡಿಯಾದ ಅನುಭವಿ ಆಟಗಾರ ಅಜಿಂಕ್ಯ ರಹಾನೆ ಹೆಸರೂ ಸೇರಿದೆ. ರಹಾನೆ ಜೊತೆಗೆ ಮೊಯಿನ್ ಅಲಿ ಮತ್ತು ಉಮ್ರಾನ್ ಮಲಿಕ್ ಕೂಡ ಇದ್ದಾರೆ.
ಕೆಕೆಆರ್ ತಂಡವು ಈ ಮೂವರು ಆಟಗಾರರ ಮಾನ ಕಾಪಾಡಿದೆ. ಅಜಿಂಕ್ಯ ರಹಾನೆ ಕಳೆದ ಸೀಸನ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡಿದ್ದರು. ಐಪಿಎಲ್ ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ರಹಾನೆ ಅವರನ್ನು ಕೆಕೆಆರ್ ಅಂತಿಮವಾಗಿ ಮೂಲ ಬೆಲೆ 1.50 ಕೋಟಿ ರೂಪಾಯಿಗೆ ಖರೀದಿಸಿದೆ.
ಮೊಯಿನ್ ಅಲಿ ದೀರ್ಘಕಾಲದಿಂದ ಚೆನ್ನೈ ಸೂಪರ್ ಕಿಂಗ್ಸ್ ಜೊತೆಯಲ್ಲಿದ್ದರು. ಕಳೆದ ಸೀಸನ್ನಲ್ಲಿ 8 ಕೋಟಿ ಸಂಭಾವನೆ ಪಡೆದಿದ್ದರು. ಈ ಬಾರಿ ಸಿಎಸ್ಕೆ ಅವರನ್ನು ಉಳಿಸಿಕೊಳ್ಳಲಿಲ್ಲ. ಕೆಕೆಆರ್ 2 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಉಮ್ರಾನ್ ಮಲಿಕ್ ರನ್ನು 75 ಲಕ್ಷ ರೂಪಾಯಿಗೆ ಖರೀದಿಸಿದೆ.
ಹೇಗಿದೆ ಕೆಕೆಆರ್ ತಂಡ: ವೆಂಕಟೇಶ್ ಅಯ್ಯರ್, ರಿಂಕು ಸಿಂಗ್, ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಅಜಿಂಕ್ಯ ರಹಾನೆ, ರಮಣದೀಪ್ ಸಿಂಗ್, ಕ್ವಿಂಟನ್ ಡಿ ಕಾಕ್, ಗುರ್ಬಾಜ್, ಅನ್ರಿಚ್ ನೋಕಿಯೆ, ಪೊವೆಲ್, ಮನೀಶ್ ಪಾಂಡೆ, ಜಾನ್ಸನ್, ಜಾನ್ಸನ್ ರಾಯ್, ಮೊಯಿನ್ ಅಲಿ, ಉಮ್ರಾನ್ ಮಲಿಕ್.
PublicNext
26/11/2024 01:51 pm