ಚಿಕ್ಕಮಗಳೂರು : ಬೀಟಮ್ಮ ಗುಂಪಿನ ಉಪಟಳ ತಾಲೂಕಿನಲ್ಲಿ ಮಿತಿಮೀರಿ ಹೋಗಿದೆ. ಇದರಿಂದ ರೈತರು ಕಂಗಾಲಾಗಿ ಹೋಗಿದ್ದು ದಿಕ್ಕೆ ತೋಚದಂತಾಗಿದೆ. ತಾಲೂಕಿನ ಮಾರಿಕಟ್ಟೆ ಅರಣ್ಯ ಪ್ರದೇಶದಲ್ಲಿ ಕಳೆದ 10 ದಿನಗಳಿಂದ ಬೀಡುಬಿಟ್ಟಿರುವ ಆನೆಗಳು ರಾತ್ರಿ ವೇಳೆ ಬೆಳೆಗಳ ಮೇಲೆ ದಾಳಿ ನಡೆಸಿ ಅಪಾರ ಹಾನಿ ಮಾಡುತ್ತಿವೆ.
ಆನೆಗಳ ದಾಂಧಲೆಗೆ ಮೆಣಸಿನಮಲ್ಲೇದೇವರಹಳ್ಳಿ ಗ್ರಾಮದ ಗದ್ದೆ ಬೈಲು ಸಂಪೂರ್ಣ ನಾಶಗೊಂಡಿದೆ. ರೈತರು ಕಷ್ಟಪಟ್ಟು ಬೆಳೆದಿದ್ದ ಪೈರನ್ನು ಆನೆಗಳು ತಿಂದು, ತುಣಿದು ಅಪಾರ ನಷ್ಟ ಮಾಡಿವೆ. ಆನೆಗಳು ರಾತ್ರಿ ವೇಳೆ ತೋಟ, ಗದ್ದೆಗಳಿಗೆ ದಾಳಿ ಇಡುತ್ತಿದ್ದಂತೆ ಇಟಿಎಫ್ ಸಿಬ್ಬಂದಿಗಳು ಪಟಾಕಿ ಸಿಡಿಸುತ್ತಿದ್ದಾರೆ.
ಈ ವೇಳೆ ಬೆದರುವ ಆನೆಗಳು ಅಡಿಕೆ, ಕಾಫಿ ಗಿಡಗಳನ್ನು ಬುಡ ಸಮೇತ ಮುರಿದು ಹಾಕುತಿವೆ ಹೀಗಾಗಿ ರೈತರಿಗೆ ಡಬ್ಬಲ್ ನಷ್ಟ ಉಂಟಾಗಿದೆ ಇದರಿಂದ ಹಾನಿಯಾಗಿರುವ ಬೆಳೆಗಳನ್ನು ಕಟಾವು ಮಾಡಲಾಗದೆ ಸ್ಥಿತಿಗೆ ರೈತರು ತಲುಪಿದ್ದು ಈ ಬೀಟಮ್ಮ ಗುಂಪು ಜಾಗ ಖಾಲಿ ಮಾಡಿದ್ರೆ ಸಾಕಪ್ಪ ಎನ್ನುತ್ತಿದ್ದಾರೆ.
PublicNext
24/11/2024 01:57 pm