ಚಿಕ್ಕಮಗಳೂರು: ಕಾಫಿನಾಡ ಜಿಲ್ಲೆಯಾದ್ಯಂತ ಕಾಡಾನೆಗಳ ಉಪಟಳಮಿತಿ ಮೀರಿ ಹೋಗಿದೆ. ಇಷ್ಟು ದಿನ ಒಂಟಿಯಾಗಿ ದಾಳಿ ಮಾಡುತ್ತಿದ್ದ ಪುಂಡಾನೆಗಳು ಇದೀಗ ಹಿಂಡು ಹಿಂಡಾಗಿ ದಾಳಿ ಇಡಲು ಆರಂಭಿಸಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ ಬೀಟಮ್ಮ ಗುಂಪಿನ ಆನೆಗಳು ದಾಂಧಲೆ ಮುಂದುವರೆಸಿದ್ದರೆ, ಅತ್ತ ಕಳಸ ಭಾಗದಲ್ಲೂ ಆನೆಗಳ ಗುಂಪು ಕಾಡಿನಿಂದ ನಾಡಿಗೆ ಬಂದು ಭತ್ತದ ಗದ್ದೆಗಳು ಕಾಫಿ ತೋಟಗಳಿಗೆ ದಾಳಿ ಇಟ್ಟು ಬೆಳೆಗಳನ್ನು ನಾಶ ಮಾಡುತ್ತಿವೆ.
ಕಳಸ ತಾಲೂಕಿನ ತೋಟದೂರು, ಬಾಳೆಹೊಳೆ ಅಳಗೋಡು, ತನೊಡಿ ಗ್ರಾಮಗಳಲ್ಲಿ ರೈತರ ಬೆಳೆಗಳಿಗೆ ಆನೆಗಳು ದಾಳಿ ಇಡುತ್ತಿವೆ. ಭತ್ತ ಕಾಫಿ ಬೆಳೆಗಳು ಕಟಾವಿಗೆ ಬಂದಿದ್ದು ಈ ಸಂದರ್ಭದಲ್ಲಿ ಆನೆಗಳು ದಾಳಿ ಇಡುತ್ತಿರುವುದರಿಂದ ಬೆಳೆ ನಷ್ಟದ ಜೊತೆಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಇತ್ತ ಅರಣ್ಯ ಇಲಾಖೆಯೂ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Kshetra Samachara
22/11/2024 05:07 pm